BengaluruCrime

ದರ್ಶನ್‌ ಬಳ್ಳಾರಿ ಜೈಲಿಗೆ, ಪವಿತ್ರಾ ಗೌಡ ಎಲ್ಲಿಗೆ..?

ಬೆಂಗಳೂರು; ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ, ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ ಫೋಟೋಗಳು ವೈರಲ್‌ ಆಗಿದ್ದರಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ.. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್‌ ಮಾಡುವುದಕ್ಕೆ ಕೋರ್ಟ್‌ ಅನುಮತಿ ನೀಡಿದೆ.. ಹೀಗಾಗಿ, ನಟ ದರ್ಶನ್‌ರನ್ನು ಬಳ್ಳಾರಿಗೆ ಶಿಫ್ಟ್‌ ಮಾಡಲಾಗುತ್ತದೆ.. ದರ್ಶನ್‌ ಒಬ್ಬರೇ ಅಲ್ಲ, ಪ್ರಕರಣದ ಎಲ್ಲಾ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.. ಈ ಮೂಲಕ ಅಕ್ರಮಗಳಿಗೆ ಬ್ರೇಕ್‌ ಹಾಕಲು ಜೈಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ..

ಇದನ್ನೂ ಓದಿ; ಟೆಸ್ಟ್‌ ಡ್ರೈವ್‌ಗೆ ಬೆಂಜ್‌ ಕಾರು ತೆಗೆದುಕೊಂಡು ಹೋದವಳು ಮಾಡಿದ್ದೇನು..?

ದರ್ಶನ್‌ ಬಳ್ಳಾರಿ ಜೈಲಿಗೆ ಹೋಗೋದಿಲ್ಲ. ಇಲ್ಲೇ ಇರುತ್ತೇನೆ ಎಂದು ಮೊಂಡು ಮಾಡಿದ್ದಾರಂತೆ.. ಆದ್ರೆ ಅಧಿಕಾರಿಗಳು ಬಿಟ್ಟಿಲ್ಲ.. ಕೊನೆಗೂ ಒಪ್ಪಿಸಿದ್ದು, ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗುತ್ತದೆ.. ಈಗಾಗಲೇ, ಆದ್ರೆ ಎ-8 ರವಿ ಶಂಕರ್, ಎ-15 ಕಾರ್ತಿಕ್, ಎ-16 ಕೇಶವಮೂರ್ತಿ ಮತ್ತು ಎ-17 ನಿಖಿಲ್ ತುಮಕೂರು ಜೈಲಿನಲ್ಲಿದ್ದಾರೆ. ಉಳಿದವರನ್ನು ಇವತ್ತು ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗುತ್ತದೆ.. ಆದ್ರೆ ಪವಿತ್ರಾಗೌಡರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಿಸಲು ತೀರ್ಮಾನಿಸಲಾಗಿದೆ..

ಇದನ್ನೂ ಓದಿ; ನಾಳೆಯೇ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಪ್ರಕರಣದ ವಿಚಾರಣೆ

ಯಾರನ್ನು ಯಾವ ಜೈಲಿಗೆ ಶಿಫ್ಟ್‌ ಮಾಡಲಾಗುತ್ತದೆ..?; ಎ-1 ಪವಿತ್ರಗೌಡ-ಪರಪ್ಪನ ಅಗ್ರಹಾರ ಜೈಲು, ಎ-2 ದರ್ಶನ್-ಬಳ್ಳಾರಿ ಜೈಲು, ಎ-3 ಪವನ್-ಮೈಸೂರು ಜೈಲು, ಎ-4 ರಾಘವೇಂದ್ರ-ಮೈಸೂರು ಜೈಲು, ಎ-5 ನಂದೀಶ್-ಮೈಸೂರು ಜೈಲು, ಎ-6 ಜಗದೀಶ್-ಶಿವಮೊಗ್ಗ ಜೈಲು, ಎ-7 ಅನುಕುಮಾರ್-ಪರಪ್ಪನ ಅಗ್ರಹಾರ ಜೈಲು, ಎ-8 ರವಿ ಶಂಕರ್-ತುಮಕೂರು ಜೈಲು, ಎ-9 ಧನರಾಜ್-ಧಾರವಾಡ ಜೈಲು, ಎ-10 ವಿನಯ್-ವಿಜಯಪುರ ಜೈಲು, ಎ-11 ನಾಗರಾಜ್- ಕಲಬುರಗಿ ಜೈಲು, ಎ-12 ಲಕ್ಷ್ಮಣ- ಶಿವಮೊಗ್ಗ ಜೈಲು, ಎ-13 ದೀಪಕ್- ಪರಪ್ಪನ ಅಗ್ರಹಾರ ಜೈಲು, ಎ-14 ಪ್ರದೂಶ್-ಬೆಳಗಾವಿ ಜೈಲು, ಎ-15 ಕಾರ್ತಿಕ್–ತುಮಕೂರು ಜೈಲು, ಎ-16 ಕೇಶವಮೂರ್ತಿ– ತುಮಕೂರು ಜೈಲು ಹಾಗೂ ಎ-17 ನಿಖಿಲ್-ತುಮಕೂರು ಜೈಲಿನಲ್ಲಿರಿಸಲಾಗುತ್ತದೆ..

ಇದನ್ನೂ ಓದಿ; ಐಸಿಸಿ ಅಧ್ಯಕ್ಷರಾಗಿ ಜಯ್‌ ಶಾ ಅವಿರೋಧ ಆಯ್ಕೆ!

Share Post