CrimeInternational

ವಿದ್ಯುತ್‌ ಟವರ್‌ಗೆ ಡಿಕ್ಕಿ ಹೊಡೆದ ಮಿನಿ ವಿಮಾನ; ಏನಾಯ್ತು ಗೊತ್ತಾ..?

ವಾಷಿಂಗ್ಟನ್; ಮಿನಿ ವಿಮಾನವೊಂದು ವಿದ್ಯುತ್‌ ಟವರ್‌ನಲ್ಲಿ ಸಿಕ್ಕಿಕೊಂಡ ಘಟನೆ ಅಮೆರಿಕದಲ್ಲಿ ನಡೆದಿದೆ. ಇಲ್ಲಿ ಮೇರಿಲ್ಯಾಂಡ್‌ನಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ, ಪೈಲಟ್‌ ನಿಯಂತ್ರಣ ತಪ್ಪಿ ವಿದ್ಯುತ್‌ ಟವರ್‌ಗೆ ಸಿಕ್ಕಿಕೊಂಡಿದೆ.  ವಿಮಾನದಲ್ಲಿ ಪೈಲಟ್‌ ಒಬ್ಬ ಮಾತ್ರ ಇದ್ದು, ಪವಾಡ ಸದೃಶ ರೀತಿಯಲ್ಲಿ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ವಿಮಾನ ಸಿಕ್ಕಿಕೊಂಡಿದ್ದರಿಂದ ಮೇರಿಲ್ಯಾಂಡ್‌ ಸೇರಿ ಹಲವು ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿತ್ತು. ಸುಮಾರು 90 ಸಾವಿರ ಮನೆ ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಕೆಲಕಾಲ ವಿದ್ಯುತ್‌ ಪೂರೈಕೆಯಾಗಲಿಲ್ಲ. ನಂತರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ವಿಮಾನವನ್ನು ತೆರವುಗೊಳಿಸಿದರು. ನಂತರ ವಿದ್ಯುತ್‌ ಪೂರೈಕೆ ಸರಾಗವಾಗುವಂತೆ ಮಾಡಿದರು.

 

 

Share Post