Sports

ಐಸಿಸಿ ಅಧ್ಯಕ್ಷರಾಗಿ ಜಯ್‌ ಶಾ ಅವಿರೋಧ ಆಯ್ಕೆ!

ನವದೆಹಲಿ; ನಿರೀಕ್ಷೆಯಂತೆ ಐಸಿಸಿಗೆ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ನೂತನ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಬಿಸಿಸಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವವಿದ್ದ ಜಯ್‌ ಶಾ, ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು.. ಆದ್ರೆ ಅವರ ವಿರುದ್ಧ ಯಾರೂ ಸ್ಪರ್ಧೆ ಮಾಡದ ಕಾರಣ ಜಯ್‌ ಶಾ ಅವರೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ..

ಇದನ್ನೂ ಓದಿ; ಗರ್ಭ ಧರಿಸೋದಕ್ಕೆ ಭಾರತದ ಈ ಹಳ್ಳಿಗೆ ಬರ್ತಾರಂತೆ ಯೂರೋಪ್‌ ಮಹಿಳೆಯರು!

ಐಸಿಸಿ ಹಾಲಿ ಅಧ್ಯಕ್ಷರಾಗಿರುವ ಗ್ರೆಗ್‌ ಬಾರ್ಕ್ಲೇ ಅವರ ಅಧಿಕಾರಾವಧಿ ನವೆಂಬರ್‌ 30ಕ್ಕೆ ಅಂತ್ಯವಾಗಲಿದೆ.. ಹೀಗಾಗಿ ಜಯ್‌ ಶಾ ಅವರು ಅವರು ಡಿಸೆಂಬರ್‌ 1ರಂದು ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.. 2020ರಲ್ಲಿ ಗ್ರೆಗ್‌ ಬಾರ್ಕ್ಲೇ ಕೂಡಾ ಅವಿರೋಧವಾಗಿ ಆಯ್ಕೆಯಾಗಿದ್ದರು..
ಇದುವರೆಗೆ ಐವರು ಭಾರತೀಯರು ಐಸಿಸಿ ಅಧ್ಯಕ್ಷರಾಗಿ ನೇಮಕವಾದಂತಾಗಿದೆ.. ಜಗಮೋಹನ್‌ ದಾಲ್ಮಿಯಾ, ಶರದ್‌ ಪವಾರ್‌, ಎನ್‌.ಶ್ರೀನಿವಾಸನ್‌ ಹಾಗೂ ಶಶಾಂಕ್‌ ಮನೋಹರ್‌ ಅವರು ಈ ಹಿಂದೆ ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.. ಇದೀಗ ಜಯ್‌ ಶಾ ಅವರು ಅತಿ ಕಿರಿಯ ವಯಸ್ಸಿನಲ್ಲಿ, ಅಂದರೆ 35ನೇ ವಯಸ್ಸಿನಲ್ಲಿ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ..

ಇದನ್ನೂ ಓದಿ; ಪರೀಕ್ಷೆ ಬರೆಯಲು ಹೋದ ಗಂಡ; ಪ್ರಿಯಕರನನ್ನು ಕರೆಸಿಕೊಂಡ ಹೆಂಡತಿ!

Share Post