CrimeDistricts

ಗಂಡನಿಗೆ ಡಿವೋರ್ಸ್‌ ಕೊಡಿ ಪ್ರಿಯಕರ ಮದುವೆಯಾಗಿದ್ದ; ಈಗ ಆತನೂ ಕೈಕೊಟ್ಟ

ಚಿಕ್ಕಬಳ್ಳಾಪುರ; ಗಂಡನಿಗೆ ಡಿವೋರ್ಸ್‌ ಕೊಡಿಸಿ, ರಿಜಿಸ್ಟರ್‌ ಮದುವೆಯಾಗಿದ್ದ ಪ್ರಿಯಕರನೂ ಈಗ ಕೈಕೊಟ್ಟಿದ್ದಾನೆಂದು ಆರೋಪಿಸಿ ಮಹಿಳೆಯೊಬ್ಬರು ಧರಣಿ ಕುಳಿತಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.  

ಗೌರಿಬಿದನೂರು ತಾಲೂಕಿನ ಶಂಭೂಕನಗರದ ನಿವಾಸಿ ಪವಿತ್ರಾ ಈಗಾಗಲೇ ಒಂದು ಮದುವೆಯಾಗಿದ್ದರು. ಆದ್ರೆ, ಅನಂತರ ಸಾದೇನಹಳ್ಳಿ ಗ್ರಾಮದ ಜಯಮ್ಮ ನಾರಾಯಣಸ್ವಾಮಿಯ ಮಗ ಮಂಜುನಾಥ್ ಎಂಬುವವರನ್ನು ಪ್ರೀತಿಸಿದ್ದರು. ಹೀಗಾಗಿ ಮಂಜುನಾಥ್‌ ಬಲವಂತದಿಂದಾಗಿ ಪವಿತ್ರಾ ಮೊದಲ ಗಂಡನಿಗೆ ಡಿವೋರ್ಸ್‌ ಕೊಟ್ಟಿದ್ದಾಳೆ. ಅನಂತರ ಮಂಜುನಾಥ್‌ನನ್ನು ರಿಜಿಸ್ಟರ್‌ ಮ್ಯಾರೇಜ್‌ ಆಗಿದ್ದಾಳೆ. ಆದ್ರೆ ಪವಿತ್ರಾ ಬೇರೆ ಜಾತಿ  ಎಂಬ ಕಾರಣಕ್ಕೆ ಮಂಜುನಾಥ್‌ ಮನೆಯವರು ಒಪ್ಪಿಕೊಂಡಿರಲಿಲ್ಲ. ಆದರೆ ಮಂಜುನಾಥ್ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಸ್ವಜಾತಿಯ ಯುವತಿಯನ್ನು ಸಹ ವರಿಸಿದ್ದನು.

ಕೆಲದಿನಗಳವರೆಗೆ ಸಂಸಾರ ಚೆನ್ನಾಗಿಯೇ ಇತ್ತು. ನಂತರ ಮಂಜುನಾಥ್ ನಮ್ಮ ಮನೆಗೆ ಬರೋದನ್ನೇ ನಿಲ್ಲಿಸಿದ್ದಾನೆ ಎಂದು ಪವಿತ್ರಾ ಆರೋಪಿಸಿದ್ದಾರೆ.  ಹೀಗಾಗಿ ತನಗೆ ನ್ಯಾಯ ಬೇಕು ಎಂದು ಪವಿತ್ರಾ ಅವರು ಮಂಜುನಾಥ್‌ ಮನೆ ಮುಂದೆ ಧರಣಿ ಕುಳಿತಿದ್ದಾಳೆ.

 

Share Post