BengaluruCrime

ಯಶವಂತಪುರ ಫ್ಲೈಓವರ್‌ನಿಂದ ಹಾರಿ ಕೆಳಗೆ ಬಿದ್ದ ಕಾರು!

ಬೆಂಗಳೂರು; ಇಂದು ಬೆಳಗಿನಜಾವ ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಯಶವಂತಪುರ ಸರ್ಕಲ್‌ನ ಫ್ಲೈಓವರ್‌ನಲ್ಲಿ ಇಂದು ಬೆಳಗಿನಜಾವ 3.45ರ ಸುಮಾರಿಗೆ ಕಾರೊಂದು ಬೈಕ್‌ಗೆ ಗುದ್ದಿದ್ದು, ನಂತರ ನಿಯಂತ್ರಣ ತಪ್ಪಿ ಫ್ಲೈಓವರ್‌ನಿಂದ ಕೆಳಗೆಬಿದ್ದಿದೆ.. ಘಟನೆಯಲ್ಲಿ ಇಬ್ಬರು ಬೈಕ್‌ ಸವಾರರು ಹಾಗೂ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ..

ಇದನ್ನೂ ಓದಿ; Breaking – ಪ್ರಾಸಿಕ್ಯೂಷನ್‌ ಕೇಸ್‌; ಸಿದ್ದರಾಮಯ್ಯಗೆ ರಿಲೀಫ್‌

ಗಾಯಗೊಂಡ ಐದು ಮಂದಿಯಲ್ಲಿ ಇಬ್ಬರು ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.. ಕಾರು ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ತೆರಳುತ್ತಿತ್ತು.. ಈ ವೇಳೆ ಫ್ಲೈಓವರ್‌ ಮೇಲೆ ಬೈಕ್‌ಗೆ ಡಿಕ್ಕಿ ಹೊಡೆದ ಕಾರು ನಂತರ ಡಿವೈಡರ್‌ ಹಾರಿ ಕೆಳಗೆ ಬಿದ್ದಿದೆ.. ಕಾರು ತಮಿಳುನಾಡು ನೋಂದಣಿ ಹೊಂದಿದೆ..
ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಮೂವರು ಸ್ವಲ್ಪ ಚೇತರಿಸಿಕೊಂಡಿದ್ದಾರೆ.. ಇಬ್ಬರು ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..

ಇದನ್ನೂ ಓದಿ; ಒಳ್ಳೆಯ ಅಭಿಮಾನಿಗಳು ಸಿಕ್ಕಿದ್ದರಿಂದ ನಾನು ಒಳ್ಳೆಯವನಾಗಿದ್ದೇನೆ; ನಟ ಸುದೀಪ್‌

Share Post