National

ಬಿಎಸ್‌ ಪಿ ಸಂಸದ ಡ್ಯಾನಿಶ್‌ ಅಲಿಗೆ ಕೊರೋನಾ

ದೆಹಲಿ: ಲೋಕಸಭಾ ಕಲಾಪ ನಡೆಯುತ್ತಿದೆ. ಈ ವೇಳೆ ಬಿಎಸ್‌ ಪಿ ಸಂಸದ ಡ್ಯಾನಿಶ್‌ ಅಲಿಗೆ ಕೊರೋನಾ ಸೋಂಕು ದೃಢಪಟ್ಟಿರುವುದು ಖಚಿತವಾಗಿದೆ.
ಡ್ಯಾನಿಶ್ ಅಲಿ ಸೋಮವಾರ ಸಂಸತ್ತಿನ ಕಲಾಪದಲ್ಲಿ ಭಾಗಿಯಾಗಿದ್ದರು. ಕೊರೋನಾ ಸೋಂಕು ದೃಢಪಟ್ಟಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 23ಕ್ಕೆ ಸಂಸತ್ತಿನ ಚಳಿಗಾಲ ಅಧಿವೇಶನ ಅಂತ್ಯವಾಗುತ್ತಿದೆ. ಕಲಾಪಕ್ಕೆ ಹಾಜರಾಗಿದ್ದ ಸಂಸದರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದರೂ ಕೂಡ ಸೋಂಕು ದೃಢಪಟ್ಟಿದೆ. ಸೋಮವಾರ ಕಲಾಪದಲ್ಲಿ ಭಾಗಿಯಾಗಿದ್ದೆ. ಹೀಗಾಗಿ ನನ್ನ ಸಂಪರ್ಕಕ್ಕೆ ಬಂದವರು ಎಲ್ಲರೂ ಕ್ವಾರಂಟೈನ್‍ಗೆ ಒಳಗಾಗಿ. ಜೊತೆಗೆ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಒಮಿಕ್ರಾನ್ ರೂಪಾಂತರದ ಕನಿಷ್ಠ 200 ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹೀಗಾಗಿ ಸಂಸದರಿಗೆ ಕೊರೋನಾ ದೃಢಪಟ್ಟಿದ್ದರಿಂದ ಕಲಾಪದಲ್ಲಿ ಭಾಗಿಯಾಗಿದ್ದವರಿಗೆ ಆತಂಕ ಸೃಷ್ಟಿಸಿದೆ.

Share Post