CrimeNational

ಚಲಿಸುತ್ತಿದ್ದ ಲಾರಿಯಿಂದ ಬಟ್ಟೆ ಕದ್ದ ಖತರ್ನಾಕ್ ಕಳ್ಳರು

ಭೋಪಾಲ್; ಭೂಪಾಲ್ ನಲ್ಲಿ ಸಿನಿಮಾ ಶೈಲಿಯಲ್ಲಿ ಕಳ್ಳತನವಾಗಿದೆ.. ಬೈಕ್ ನಲ್ಲಿ ಬಂದ ಮೂವರು ಕಳ್ಳರು ಚಲಿಸುತ್ತಿದ್ದ ಲಾರಿಯನ್ನು ಹತ್ತಿ ಅದರಲ್ಲಿ ಕಳುವು ಮಾಡಿದ್ದಾರೆ. ಕನ್ನಡದ ಕಿರಾತಕ ಸಿನಿಮಾ ಶೈಲಿಯಲ್ಲಿ ಈ ಕಳ್ಳತನ ನಡೆದಿದೆ.

  ಆಗ್ರಾ ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ರೆಡಿಮೇಡ್ ಬಟ್ಟೆಗಳನ್ನು ತುಂಬಿದ್ದ ಲಾರಿಯು ಹೋಗುತ್ತಿತ್ತು. ಬೈಕ್ ನಲ್ಲಿ ಮೂವರು ವ್ಯಕ್ತಿಗಳು ಆ ಲಾರಿಯನ್ನು ಹಿಂಬಾಲಿಸಿದ್ದಾರೆ. ಲಾರಿ ಚಲಿಸುತ್ತಿದ್ದಾಗಲೇ ಒಬ್ಬ ಕಳ್ಳ ಆ ಲಾರಿಯ ಮೇಲೆ ಅತ್ತಿ ಬಟ್ಟೆ ಬಾಕ್ಸ್ಗಳನ್ನು ಕೆಳಗೆ ಬಿಸಾಕಿದ್ದಾನೆ. ನಂತರ ಆ ಮೂವರು ಬಾಕ್ಸ್ಗಳೊಂದಿಗೆ ಎಸ್ಕೇಪ್ ಆಗಿದ್ದಾರೆ.

  ಇದನ್ನು ನೋಡಿದ ಹಿಂದೆ ಬರುತ್ತಿದ್ದ ಕಾರಿನ ಚಾಲಕ ಈ ದೃಶ್ಯಗಳನ್ನು ಸೆರೆಹಿಡಿದಿದ್ದಾನೆ. ಕಾರಿನ ಚಾಲಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.

 

Share Post