ಚಾರ್ಜ್‌ಶೀಟ್‌ನಲ್ಲಿ ಪ್ರಿಯಾಂಕಾ ಗಾಂಧಿ ಹೆಸರು; ಏನಿದು ಕೃಷಿ ಭೂಮಿ ಖರೀದಿ ಪ್ರಕರಣ..?
ಫರೀದಾಬಾದ್; ಹರಿಯಾಣ ಫರಿದಾಬಾದ್ನಲ್ಲಿ ಕೃಷಿ ಭೂಮಿ ಖರೀದಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಾತ್ರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಭೂಮಿ ಖರೀದಿ ಪ್ರಕ್ರಿಯೆಯಲ್ಲಿ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದರು ಎಂದು ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಆದ್ರೆ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ಆರೋಪಿ ಎಂದು ಮಾತ್ರ ಹೇಳಿಲ್ಲ.
ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಹೆಚ್.ಎಲ್.ಪಹ್ವಾ ಮೂಲಕ 2006ರಲ್ಲಿ ಕೃಷಿ ಭೂಮಿ ಖರೀದಿಸಿ 2010ರಲ್ಲಿ ಮಾರಾಟ ಮಾಡಿದ್ದರು. 2005-2006ರಲ್ಲಿ ಏಜೆಂಟ್ ಪಹ್ವಾ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ರಾಬರ್ಟ್ ವಾದ್ರಾ 40.08 ಎಕರೆ ಜಾಗ ಖರೀದಿಸಿದ್ದರು. ಅದನ್ನು ಡಿಸೆಂಬರ್ 2010ರಲ್ಲಿ ಮತ್ತೆ ಅವರಿಗೇ ಮಾರಾಟ ಮಾಡಿದ್ದರು. ಈ ಜಮೀನನ್ನು ಅಕ್ರಮ ಹಣ ವರ್ಗಾವಣೆ ಮೂಲಕ ಖರೀದಿಸಲಾಗಿದೆ ಎಂಬುದು ಜಾರಿ ನಿರ್ದೇಶನಾಲಯದ ಆರೋಪವಾಗಿದೆ.