ಮನೆಗೆ ನುಗ್ಗಿ ಅಪ್ರಾಪ್ತ ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ!
ನವದೆಹಲಿ; ಯುವಕನೊಬ್ಬ ಮನೆಗೆ ನುಗ್ಗಿ ಅಪ್ರಾಪ್ತ ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದ ಲಕ್ನೋದ ಬಿ-376 ವಿಶಾಲ್ ಖಂಡ್‌ನ ಗೋಮತಿ ನಗರದಲ್ಲಿ ನಡೆದಿದೆ.. ಇದರ ವಿಡಿಯೋ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಪ್ರಬಲ್ ಪ್ರತಾಪ್ ಸಿಂಗ್ ಎಂಬ ವ್ಯಕ್ತಿಯೇ ಈ ಕೃತ್ಯ ಎಸಗಿರುವಾತ. ಈತ ಮನೆಯಲ್ಲಿ ಅಪ್ರಾಪ್ತ ಬಾಲಕಿ ಒಬ್ಬಳೇ ಇದ್ದಾಗ ಮನೆಗೆ ನುಗ್ಗಿದ್ದಾನೆ.. ಆಕೆಗೆ ಅಶ್ಲೀಲವಾಗಿ ಬೈದಿದ್ದಲ್ಲದೆ, ಹಲ್ಲೆ ಕೂಡಾ ಮಾಡಿದ್ದಾನೆ.. ಜೊತೆಗೆ ಫೋನ್ ಒಡೆದುಹಾಕಿದ್ದಾನೆ.. ಆಕೆಯ ಬಟ್ಟೆ ಹರಿದು ಅಮಾನುಷವಾಗಿ ವರ್ತಿಸಿದ್ದಾನೆ. ಆತ ರಿವಾಲ್ವರ್ ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ..