CrimePolitics

ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನ ವಿಚಾರ; ಹೈಕಮಾಂಡ್‌ಗೆ ವರದಿ ಕೊಟ್ಟ ಕಾಂಗ್ರೆಸ್‌

ಬೆಂಗಳೂರು; 31 ವರ್ಷಗಳ ಅಯೋಧ್ಯ ವಿಚಾರ ಸಂಬಂಧ ನಡೆದ ಪ್ರತಿಭಟನೆ ವೇಳೆ ಹುಬ್ಬಳ್ಳಿಯಲ್ಲಿ ಗಲಭೆ ನಡೆದಿತ್ತು. ಈ ಪ್ರಕರಣವನ್ನು ಈಗ ರಿ ಓಪನ್‌ ಮಾಡಲಾಗಿದೆ. ಓರ್ವ ಕರಸೇವಕನನ್ನು ಬಂಧಿಸಲಾಗಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಹರಿಹಾಯುತ್ತಿದೆ. ಜೊತೆಗೆ ರಾಮಮಂದಿರ ಉದ್ಘಾಟನೆ ವೇಳೆಯಲ್ಲೇ, ಕರಸೇವಕನನ್ನು ಬಂಧಿಸಲಾಗಿದ್ದು, ಕಾಂಗ್ರೆಸ್‌ ಹಿಂದೂ ವಿರೋಧಿ ಎಂದು ಆರೋಪ ಮಾಡಲಾಗುತ್ತಿದೆ. ಇದರಿಂದಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರವಾಗಿದೆ. ಹೀಗಾಗಿ ಘಟನೆ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಮಾಹಿತಿ ಕೇಳಿತ್ತು.

ರಾಜ್ಯ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಲಾಂಗ್‌ ಪೆಂಡಿಂಗ್‌ ಕೇಸ್‌ಗಳ ಕ್ಲಿಯರ್‌ ಡ್ರೈವ್‌ ನಡೆಯುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಕರಸೇವಕರ ಕೇಸ್‌ ಕೂಡಾ ಸೇರಿದೆ. ರಾಮಮಂದಿರ ಲೋಕಾರ್ಪಣೆ ಸಮಯದಲ್ಲೇ ಹೀಗೆ ಆಗಿರುವುದು ಕಾಕತಾಳೀಯವಷ್ಟೇ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ವರದಿ ನೀಡಲಾಗಿದೆ. ಬಿಜೆಪಿ ವಿನಾಕಾರಣ ಇದರಲ್ಲೂ ರಾಜಕೀಯ ಮಾಡುತ್ತಿದೆ ಎಂದೂ ಹೇಳಲಾಗಿದೆ.

 

Share Post