CrimeDistricts

ಕೊಡಗಿನಲ್ಲಿ ಯೂನಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಆತ್ಮಹತ್ಯೆ!

ಕೊಡಗು(Kodagu); ಕೊಡಗು ಜಿಲ್ಲೆಯ ಕಕ್ಕಬ್ಬೆ ಯೂನಿಯನ್‌ ಬ್ಯಾಂಕ್‌ ಶಾಖೆಯ ಮ್ಯಾನೇಜರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಬ್ಯಾಂಕ್‌ ಶಾಖೆಯಲ್ಲೇ ಅವರು ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ..
ಕೇರಳ ಮೂಲದ ಬ್ಯಾಂಕ್‌ ಮ್ಯಾನೇಜರ್‌ 46 ವರ್ಷದ ವಿಜು ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.. ಇಂದು ಬೆಳಗ್ಗೆ ಎಂದಿನಂತೆ ಬ್ಯಾಂಕ್‌ ಶಾಖೆಗೆ ಕೆಲಸಕ್ಕೆ ಬಂದಿದ್ದ ಅವರು, ಲಾಕರ್‌ ರೂಮಿಗೆ ಹೋಗಿದ್ದಾರೆ.. ಅಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಕೆಲಸ ಆರಂಭಿಸುವ ಮುನ್ನವೇ ಈ ಘಟನೆ ನಡೆದಿದೆ.. ಅಷ್ಟೊತ್ತಿಗೆ ನೌಕರರು ಇನ್ನೂ ಬಂದಿರಲಿಲ್ಲ.. ಹೀಗಾಗಿ ಯಾರೂ ನೋಡಿಕೊಂಡಿಲ್ಲ.
ಕೇರಳದ ಚಿಂಗೋಲಿ ಆಲಿಪುಳ ಗ್ರಾಮದ ನಿವಾಸಿ ವಿಜು ಇಲ್ಲಿಗೆ ನೇಮಕವಾಗಿದ್ದರು.. ಆದ್ರೆ ಯಾಕೆ ಇದ್ದಕ್ಕಿದ್ದಂತೆ ಈ ತೀರ್ಮಾನ ತೆಗೆದುಕೊಂಡರು ಅನ್ನೋದು ಗೊತ್ತಾಗಿಲ್ಲ. ನಾಪೋಕ್ಲು ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..

Share Post