ಬಾಕಿ ಹಣ ಕೊಡದಿದ್ದಕ್ಕೆ ವ್ಯಕ್ತಿಯನ್ನು ಅರೆಬೆತ್ತಲೆ ಕೂರಿಸಿದ ಬಂಕ್ ಮಾಲೀಕ
ವಿಜಯಪುರ; ಬೋರ್‌ವೆಲ್‌ಗಳಿಗೆ ಡೀಸೆಲ್ ಹಾಕಿಸಿದ್ದರ ಬಾಕಿ ಕೊಡದಿದ್ದಕ್ಕೆ ವ್ಯಕ್ತಿಯೊಬ್ಬ ಬಂಕ್‌ನಲ್ಲಿ ಅರೆಬೆತ್ತಲೆ ಕೂರಿಸಿರುವ ಘಟನೆ ವಿಜಯಪುರದ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಮೌನೇಶ್ ಪತ್ತಾರ್ ಎಂಬುವವರು ತಮಿಳುನಾಡು ಮೂಲದ ಶಿವಶಕ್ತಿ ಬೋರ್‌ವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಬೋರ್‌ವೆಲ್‌ಗಳಿಗೆ ಸಾಲವಾಗಿ ಡೀಸೆಲ್ ಹಾಕಿಸಿದ್ದರು. ಆದ್ರೆ ಅದರ ಬಾಕಿ ನೀಡದ ಕಾರಣ ಅರೆಬೆತ್ತಲೆಯಾಗಿ ಕೂರಿಸಲಾಗಿದೆ.
ಮುದ್ದೆಬಿಹಾಳ ಪಟ್ಟಣದಲ್ಲಿರುವ ಬೋಸಲೆ ಬಂಕ್ ನಲ್ಲಿ ಈ ಘಟನೆ ನಡೆದಿದೆ. ಬೋರ್‌ವೆಲ್ಸ್‌ಗೆ 10 ರಿಂದ 15 ಲಕ್ಷ ರೂಪಾಯಿಯವರೆಗೆ ಡೀಸೆಲ್ ಹಾಕಿಸಲಾಗಿದೆಯಂತೆ. ಆದ್ರೆ ಹಣ ನೀಡಿಲ್ಲ. ಹೀಗಾಗಿ 12 ದಿನಗಳಿಂದ ಮೌನೇಶ್ ಪತ್ತಾರ್‌ನ್ನು ಅರೆಬೆತ್ತಲೆ ಕೂರಿಸಲಾಗಿದೆ. ಹೀಗಾಗಿ, ಮೌನೇಶ ಬಿಡುಗಡೆಗಾಗಿ ಆತನ ಪತ್ನಿ ಹಾಗೂ ಮಕ್ಕಳು ಕಳೆದ ಮೂರು ದಿನಗಳಿಂದ ಬೋಸಲೆ ಪೆಟ್ರೋಲ್ ಬಂಕ್ ನಲ್ಲೇ ಕುಳಿತುಕೊಂಡಿದ್ದಾರೆ.