BengaluruCrime

ಲೇಡೀಸ್‌ ಪಿಜಿಯಲ್ಲಿ ಯುವತಿಯ ಕತ್ತು ಕುಯ್ದು ಬರ್ಬರ ಹತ್ಯೆ..!

ಬೆಂಗಳೂರು; ಬೆಂಗಳೂರಿನಲ್ಲಿ ಕೊಲೆ, ಸುಲಿಗೆಗಳಂತಹ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ.. ಇದಕ್ಕೆ ತಾಜಾ ಉದಾಹರಣೆಯಾಗಿ ಲೇಡೀಸ್‌ ಪಿಜಿಯೊಂದರಲ್ಲಿ ಯುವತಿಯ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.. ಬೆಂಗಳೂರಿನ ಕೋರಮಂಗಲದ ವಿಆರ್‌ ಲೇಔಟ್‌ನಲ್ಲಿರುವ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; Money Horoscope; ಈ ರಾಶಿಗಳವರಿಗೆ ಏಕಕಾಲದಲ್ಲಿ ಎರಡು ಧನಯೋಗ – ಹಣವೋ ಹಣ!

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲಕ ಕೃತಿ ಕುಮಾರಿ ಎಂಬ 24 ವರ್ಷದ ಯುವತಿಯೇ ಕೊಲೆಯಾದವಳು.. ಕಳೆದ ರಾತ್ರಿ 11.10 ರಿಂದ 11.30ರ ಸಂದರ್ಭದಲ್ಲಿ ಯುವಕನೋರ್ವ ಲೇಡೀಸ್‌ ಪಿಜಿಗೆ ನುಗ್ಗಿದ್ದಾನೆ.. ಪಿಜಿಯ ಮೂರನೇ ಮಹಡಿಯಲ್ಲಿದ್ದ ಯುವತಿ ಕೃತಿ ಕುಮಾರಿ ಕೊಠಡಿಗೆ ನುಗ್ಗಿರುವ ಯುವಕ ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಲಾಗಿದೆ.. ಕೊಲೆ ಮಾಡಿದ ನಂತರ ಆ ಯುವಕ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ…

ಇದನ್ನೂ ಓದಿ; ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಚೊಂಬು ಸಿಕ್ಕಿದೆ; ಸಿಎಂ ಸಿದ್ದರಾಮಯ್ಯ

ಕೃತಿ ಕುಮಾರಿಗೆ ಪರಿಚಯವಿರುವ ಯುವಕನೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ.. ಪಿಜಿ ಮಾಲೀಕನ ನಿರ್ಲಕ್ಷ್ಯದಿಂದ ಆ ಯುವಕ ಪಿಜಿಗೆ ನುಗ್ಗಿದ್ದು, ಯುವತಿಯ ಕೊಲೆಗೆ ಕಾರಣವಾಗಿದೆ.. ಈ ಬಗ್ಗೆ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.. ಪಿಜಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳ ಫುಟೇಜ್‌ಗಳನ್ನು ಪಡೆದಿರುವ ಪೊಲೀಸರು, ಅದರ ಆಧಾರದ ಮೇಲೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ..

ಇದನ್ನೂ ಓದಿ; Daily Horoscope; ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ಗೊತ್ತಾ..?

Share Post