ಲಡಾಕ್‌ನಲ್ಲಿ ಹಿಮಪಾತ; ನಡುಗುತ್ತಲೇ ಸಂಕಷ್ಟ ಹಂಚಿಕೊಂಡ ಬೆಂಗಳೂರಿನ ವೈದ್ಯರು
ಬೆಂಗಳೂರು; ಲಡಾಕ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಜೊತೆಗೆ ದೊಡ್ಡ ಮಟ್ಟದ ಹಿಮಪಾತವೂ ಆಗುತ್ತಿದೆ. ಇದರಿಂದಾಗಿ ಹೆದ್ದಾರಿಗಳಲ್ಲಿ ಭೂ ಕುಸಿತಗಳು ಉಂಟಾಗಿವೆ. ವಿಮಾನ ಹಾರಾಟೌೂ ಬಂದ್ ಆಗಿದೆ. ಇದರಿಂದಾಗಿ ಬೆಂಗಳೂರು ಮೂಲದ ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಸಕ್ಕೆಂದು ತೆರಳಿದ್ದ ನಾಲ್ವರು ವೈದ್ಯರು, ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಬೆಂಗಳೂರು ಮೂದಲ ವೈದ್ಯರು ಲಾಡ್ಜ್ ಒಂದರಲ್ಲಿ ತಂಗಿದ್ದು, ಚಳಿಯಲ್ಲಿ ನಡುಗುತ್ತಲೇ ತಮ್ಮ ಗೋಳು ತೋಡಿಕೊಂಡಿದ್ದಾರೆ. ತುಂಬಾ ತೊಂದರೆಯಾಗುತ್ತಿದೆ. ಆರೋಗ್ಯ ಕೂಡಾ ಹದಗೆಡುತ್ತಿದೆ. ಹೇಗಾದರೂ ಮಾಡಿ ನಮ್ಮನ್ನು ಬೆಂಗಳೂರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಎಂದು ಬೆಂಗಳೂರಿನ ವೈದ್ಯರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ವಿಮಾನಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಏರ್‌ಪೋರ್ಟ್‌ನಲ್ಲೇ ಪ್ರಯಾಣಿಕರು ದೊಡ್ಡ ಸಂಖ್ಯೆಯಲ್ಲಿ ತಂಗಿದ್ದಾರೆ. ನಿರಂತರ ಮಳೆಯಿಂದಾಗಿ ಅವರ ಆರೋಗ್ಯ ಕೂಡಾ ಹದಗೆಡುತ್ತಿದೆ ಎಂದು ತಿಳಿದುಬಂದಿದೆ.