ಜಿಂಕೆ ಕೊಂಬು, ಆನೆ ಕಾಲು ಮಾರಾಟಕ್ಕೆ ಯತ್ನ; ಇಬ್ಬರ ಬಂಧನ
ಅಸ್ಸಾಂ: ಜಿಂಕೆ ಕೊಂಬುಗಳು, ಆನೆ ಕಾಲು ಹಾಗೂ ಆಮೆ ಚರ್ಮವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂನ ಕರ್ಬಿ ಅಂಗ್ಲಾಂಗ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಪೊಲೀಸರ ದಾಳಿ ವೇಳೆ ಹಲವು ಜಿಂಕೆ ಕೊಂಬುಗಳು, ಮೂಳೆಗಳು, ಆನೆ ಕಾಲಿನ ಮೂಳೆಗಳು, ಆಮೆ ಚರ್ಮ ಪತ್ತೆಯಾಗಿದೆ. ಜೊತೆಗೆ ಸುಮಾರು 795 ಗ್ರಾಮ ಹೈರಾಯಿನ್ ಕೂಡಾ ಪತ್ತೆಯಾಗಿದೆ.
ಕಾಡುಗಳಲ್ಲಿ ಪ್ರಾಣಿಗಳನ್ನು ಕೊಂದು ಅವುಗಳ ಬೆಲೆಬಾಳುವ ಭಾಗಗಳನ್ನು ಸಂಗ್ರಹಿಸಿ ಇವರು ಮಾರಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಇದರ ಜೊತೆಗೆ ಡ್ರಗ್ಸ್ ಕೂಡಾ ಮಾರಾಟ ಮಾಡುತ್ತಿದ್ದರೆಂದು ಗೊತ್ತಾಗಿದೆ.


