ಅಂದು ಮೋದಿಯ ಟ್ವಿಟ್ಟರ್ ಖಾತೆ ಹ್ಯಾಕ್, ಇಂದು ಮಾಹಿತಿ ಮತ್ತು ಪ್ರಸಾರ ಖಾತೆ ಹ್ಯಾಕ್
ನವದೆಹಲಿ : ಕಳೆದ ತಿಂಗಳು ಇದೇ ದಿನದಂದು ಮೋದಿ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಈಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ಮೋದಿ ಅವರ ಟ್ವಿಟ್ಟರ್ ಹ್ಯಾಕ್ ಮಾಡಿದ ವೇಳೆ ಬಿಟ್ ಕಾಯಿನ್ ಅನ್ನು ಭಾರತದಲ್ಲಿ ಅಧಿಕೃತ ಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು. ಈಗ ಎಲೋನ್ ಮಸ್ಕ್ ಎಂದು ಬದಲಿಸಿದ್ದರು.
ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿ, ʼಉತ್ತಮ ಕೆಲಸ . ಹೊಸ ವರ್ಷದ ಕಾರ್ಯಕ್ರಮ ಎಂದು ಕಿಡಿಗೇಡಿಗಳು ಟ್ವೀಟ್ ಮಾಡಿದ್ದರು. ಹಾಗೆಯೇ ಎಲೋನ್ ಮಸ್ಕ್ ಅವರ ಟ್ವೀಟ್ ಒಂದನ್ನು ರೀ ಟ್ವೀಟ್ ಮಾಡಲಾಗಿತ್ತು.
ತಕ್ಷಣ ಎಚ್ಚೆತ್ತುಕೊಂಡ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟ್ಟರ್ ಖಾತೆಯನ್ನು ಸುರಕ್ಷಿತಗೊಳಿಸಿಕೊಂಡಿದೆ. ಹ್ಯಾಕ್ ಆಗಿದ್ದರ ಬಗ್ಗೆ ಯಾವುದೇ ಪ್ರತಿಕ್ರಿಯೇ ನೀಡಿಲ್ಲ