Crime

ಗಡಿಯಲ್ಲಿ ಬಿಎಸ್‌ಎಫ್‌ ಕಾರ್ಯಾಚರಣೆ; ಹೆರಾಯಿನ್‌, ಪಿಸ್ತೂಲ್‌ಗಳ ವಶ

ಫಿರೋಜ್‌ಪುರ:  ಪಾಕಿಸ್ತಾನ ಗಡಿಯಲ್ಲಿ ಬಿಎಸ್‌ಎಫ್‌ ಸಿಬ್ಬಂದಿ, ಭಾರಿ ಪ್ರಮಾಣದ ಹೆರಾಯಿನ್‌ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಪಂಜಾಬ್‌ನ ಫಿರೋಜ್‌ಪುರ್‌ ಹಾಗೂ ಅಮೃತಸರದ ಬಳಿ ದಾಳಿ ನಡೆಸಿರುವ ಬಿಎಸ್‌ಎಫ್‌ ಯೋಧರು, 7.4 ಕೆಜಿಯಷ್ಟು ಹೆರಾಯಿನ್‌ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಎರಡು ಪಿಸ್ತೂಲ್‌ಗಳು ಕೂಡಾ ಪತ್ತೆಯಾಗಿವೆ.

ಕಳೆದ ಮೂರು ದಿನಗಳಿಂದ ಬಿಎಸ್‌ಎಫ್‌ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದೆ. ಈ ಮೂರು ದಿನಗಳಲ್ಲಿ ಬರೋಬ್ಬರಿ 150 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ.

Share Post