ಸೋನಿಯಾ ಗಾಂಧಿ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ದೂರು
ಬೆಂಗಳೂರು; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಸೋನಿಯಾಗಾಂಧಿಯವರು ನಿನ್ನೆಯ ಭಾಷಣದಲ್ಲಿ ಕರ್ನಾಟಕದ ಸಾರ್ವಭೌಮತೆಯ ಬಗ್ಗೆ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದೇನೆ ಎಂದು ಶೋಭಾ ಹೇಳಿದ್ದಾರೆ.
ದೆಹಲಿಯ ಜೆಎನ್ಯುನಲ್ಲಿ ತುಕಡೆ ಗ್ಯಾಂಗ್ ದೇಶ ವಿಭಜನೆ ಬಗ್ಗೆ ಮಾತನಾಡುತ್ತಿದ್ದರು. ಆ ಭಾಷೆಯನ್ನೇ ಸೋನಿಯಾ ಗಾಂಧಿ ಇಲ್ಲಿ ಬಳಕೆ ಮಾಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂದು ನಾವೆಲ್ಲಾ ಹೇಳುತ್ತಿದ್ದೇವೆ. ನಾವೆಲ್ಲಾ ಒಂದಾಗಿ ಬಾಳುತ್ತಿದ್ದೇವೆ. ಆದ್ರೆ ಸೋನಿಯಾ ಗಾಂಧಿ ಭಾರತದ ವಿರುದ್ಧ ಮಾತನಾಡಿದ್ದಾರೆ ಎಂದು ಶೋಭಾ ಆರೋಪ ಮಾಡಿದ್ದಾರೆ.