Crime

ರಾಂಚಿ ಬಳಿ ರೈಲುಗಳ ಡಿಕ್ಕಿ; ಲೋಕೋಪೈಲಟ್‌ ಗಂಭೀರ

ರಾಂಚಿ: ಜಾರ್ಖಂಡ್‌ನ ಹಟಿಯಾ-ಬಾರಾಮುಡಾ ಮಾರ್ಗದಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಲೋಡ್‌ ಹಾಗೂ ಅನ್‌ಲೋಡ್‌ ಆದ ರೈಲುಗಳ ನಡುವೆ ಭೀಕರವಾದ ಡಿಕ್ಕಿ ಸಂಭವಿಸಿದ್ದು, ಇಬ್ಬ ಲೋಕೋಪೈಲಟ್‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗೊತ್ತಾಗಿದೆ. ಮತ್ತೊಬ್ಬ ಪೈಟ್‌ ಸಣ್ಣ ಪುಟ್ಟ ಗಾಯಗಳಿಂದ ಬಚಾವಾಗಿದ್ದಾರೆ.

   ಪಾಕ್ರಾ ಹಾಗೂ ಕುರುಕ್ರಾ ರೈಲು ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ. ಕಾರ್ಯಾಚರಣೆ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.

Share Post