CrimeDistricts

ಅಪಘಾತದಿಂದ ಕಾರಿನ ಭಾಗಗಳೆಲ್ಲಾ ಚೆಲ್ಲಾಪಿಲ್ಲಿ!; ಮಾರುದೂರ ಹೋಗಿ ಬಿದ್ದ ಎಂಜಿನ್‌!

ಉಡುಪಿ; ಉಡುಪಿ ಬಳಿ ಭೀಕರ ಅಪಘಾತ ನಡೆದಿದೆ.. ಡಿವೈಡರ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಅದರ ಭಾಗಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.. ಇಷ್ಟೇಲ್ಲಾ ಅಪಘಾತವಾದರೂ ಅದೃಷ್ಟವಶಾತ್‌ ಕಾರಿನಲ್ಲಿದ್ದರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ..

ಉಡುಪಿ ನಗರದ ಅಂಬಾಗಿಲು ಭಾಗದಲ್ಲಿ ಈ ಘಟನೆ ನಡೆದಿದೆ.. ಕಾರು ವೇಗವಾಗಿ ಓಡಿಸಲಾಗುತ್ತಿತ್ತು.. ಈ ವೇಳೆ ಅದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ.. ಗುದ್ದಿದ ರಭಸಕ್ಕೆ ಇಡೀ ಕಾರು ನಜ್ಜುಗುಜ್ಜಾಗಿದ್ದು, ಪಲ್ಟಿ ಹೊಡೆದಿದೆ.. ಎಂಜಿನ್‌ ಕಾರಿನಿಂದ ಬೇರ್ಪಟ್ಟು ಸ್ವಲ್ಪ ದೂರದಲ್ಲಿ ಬಿದ್ದಿದೆ..

ಮಾರುತಿ ಎಸ್ ಕ್ರಾಸ್ ಹೆಸರಿನ ಈ ಕಾರು ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ.. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು.. ಎಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.. ಎಲ್ಲರೂ ಕೂಡಾ ಅಪಾಯದಿಂದ ಪಾರಾಗಿದ್ದಾರೆ..

 

Share Post