ದಲಿತರಿಗೆ ಹಕ್ಕು ಕೊಟ್ಟಿದ್ದು ಅಂಬೇಡ್ಕರ್ ಅಲ್ಲ; ತಾಡಿಕೊಂಡ ಶಾಸಕಿ ವಿವಾದಿತ ಹೇಳಿಕೆ
ಗುಂಟೂರು: ತಾಡಿಕೊಂಡ ಶಾಸಕಿ ಉಂಡವಲ್ಲಿ ಶ್ರೀದೇವಿ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಗುಂಟೂರಿನ ಲಾಡ್ಜ್ ಸೆಂಟರ್‌ನಲ್ಲಿರುವ ವಿಗ್ರಹವನ್ನು ನೋಡಿ, ಇದು ಅಂಬೇಡ್ಕರ್ ಅವರದ್ದೇನಾ ಎಂದು ಪ್ರಶ್ನೆ ಮಾಡಿದ್ದಾರೆ. ವಿಶ್ವ ಮಾದಿಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಶ್ರೀದೇವಿ, ಸಂವಿಧಾನ ಕತೃ ಅಂಬೇಡ್ಕರ್ ಬಗ್ಗೆಯೂ ಮಾತನಾಡಿದ್ದಾರೆ. ನಾವು ಬಾಬು ಜಗಜೀವನ್ ರಾಮ್ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ನಮಗೆ ಸಂವಿಧಾನದ ಹಕ್ಕುಗಳು ಅಂಬೇಡ್ಕರ್‌ರಿಂದ ಬರಲಿಲ್ಲ. ಜಗಜೀವನ್ ರಾಮ್ ಅವರು ನಮಗೆ ಸಂವಿಧಾನದ ಹಕ್ಕುಗಳನ್ನು ನೀಡಿದರು ಎಂದು ಶಾಸಕಿ ಉಂಡವಲ್ಲಿ ಶ್ರೀದೇವಿ ವಿವಾದಿತ ಭಾಷಣ ಮಾಡಿದ್ದಾರೆ.
ಇಂದು ನಾವು ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆಯುತ್ತಿದ್ದೇವೆ ಎಂದರೆ ಅದಕ್ಕೆ ಅಂಬೇಡ್ಕರ್ ಕಾರಣವಲ್ಲ, ಜಗನ್ ಜೀವನ್‌ರಾಮ್ ಕಾರಣ ಎಂದು ಶ್ರೀದೇವಿ ಹೇಳಿದ್ದಾರೆ. ಶಾಸಕಿ ಶ್ರೀದೇವಿಯವರ ಹೇಳಿಕೆಗೆ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕ್ಷಮೆ ಕೇಳಬೇಕೆಂದು ಆಗ್ರಹಿಸಿವೆ.