International

ಸ್ಪೇನ್‌ನಲ್ಲಿ 1.61 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದೃಢ

ಮ್ಯಾಡ್ರಿಡ್‌ : ಸ್ಪೇನ್‌ನಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ಕೋವಿಡ್‌ ೧೯ ಸೋಂಕು ದೃಢಪಟ್ಟು ಬರೋಬ್ಬರಿ 161688 ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 74ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್‌ ಸಾಂಕ್ರಾಮಿಕ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಸ್ಪೇನ್‌ನಲ್ಲಿ ಒಂದೇ ದಿನದಲ್ಲಿ ಇಷ್ಟು ಪ್ರಕರಣಗಳು ವರದಿಯಾಗಿವೆ ಎಂದೂ ಮಾಹಿತಿ ನೀಡಿದೆ.

ಸ್ಪೇನ್‌ ನಲ್ಲಿಯೂ ಓಮಿಕ್ರಾನ್‌ ಪ್ರಕರಣಗಳು ವರದಿಯಾಗ್ತಿವೆ, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

Share Post