Health

ತೆಲಂಗಾಣದಲ್ಲಿ ಒಮಿಕ್ರಾನ್‌ ಆರ್ಭಟ: 67 ಮಂದಿಗೆ ಸೋಂಕು..!

ಹೈದರಾಬಾದ್‌: ತೆಲಂಗಾಣದಲ್ಲಿ ಒಮಿಕ್ರಾನ್‌ ಸೋಂಕು ವೇಗವಾಗಿ ಹರಡುತ್ತಿದ್ದು, ಭೀತಿಗೆ ಕಾರಣವಾಗಿದೆ. ನಿನ್ನೆ ಕೂಡಾ ತೆಲಂಗಾಣದಲ್ಲಿ ಐದು ಮಂದಿ ಒಮಿಕ್ರಾನ್‌ ಸೋಂಕು ದೃಢಪಟ್ಟಿದೆ. ಇದುವರೆಗೆ ತೆಲಂಗಾಣದಲ್ಲಿ 67 ಮಂದಿಗೆ ಒಮಿಕ್ರಾನ್‌ ಸೋಂಕು ಕಾಣಿಸಿಕೊಂಡಿದ್ದಾರೆ.

ಇನ್ನು ನಿನ್ನೆ ಒಂದೇ ದಿನ ತೆಲಂಗಾಣದಲ್ಲಿ 280 ಕೊವಿಡ್‌ ಪ್ರಕರಣಗಳು ಕಾಣಿಸಿಕೊಂಡಿವೆ. ಕೊವಿಡ್‌ಗೆ ಒಬ್ಬರು ಬಲಿಯಾಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಸದ್ಯ 5715 ಕೊವಿಡ್‌ ಸಕ್ರಿಯ ಪ್ರಕರಣಗಳಿವೆ.

ಇನ್ನು ಆಂಧ್ರಪ್ರದೇಶದಲ್ಲಿ ನಿನ್ನೆ ಯಾವುದೇ ಒಮಿಕ್ರಾನ್‌ ಪ್ರಕರಣ ಕಾಣಿಸಿಕೊಂಡಿಲ್ಲ. ಆಂಧ್ರಪ್ರದೇಶದಲ್ಲಿ ಇದುವರೆಗೆ 16 ಮಂದಿಗೆ ಒಮಿಕ್ರಾನ್‌ ಸೋಂಕು ತಗುಲಿದೆ. ಇನ್ನು ಆಂಧ್ರಪ್ರದೇಶದಲ್ಲಿ ನಿನ್ನೆ ಒಂದೇ ದಿನ 130 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಒಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. 1081 ಮಂದಿ ಸಕ್ರಿಯ ಪ್ರಕರಣಗಳು ಆಂಧ್ರಪ್ರದೇಶದಲ್ಲಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

Share Post