CrimeNational

ಅಸ್ಸಾಂ 15 ಕೋಟಿ ಮೊತ್ತದ ಡ್ರಗ್ಸ್‌ ವಶ; ಇಬ್ಬರ ಅರೆಸ್ಟ್‌

ಅಸ್ಸಾಂ; ಅಸ್ಸಾಂನ ಕರ್ಬಿ ಅಂಗ್‌ಲಾಂಗ್‌ ಜಿಲ್ಲೆಯಲ್ಲಿ ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಇಬ್ಬರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಅಸ್ಸಾಂ ಪೊಲೀಸರು ಮಾಹಿತಿ ನೀಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಲ್ಲಾಯ್‌ ಚೆಕ್‌ ಪೋಸ್ಟ್‌ ಬಳಿ ದಾಳಿ ನಡೆಸಿ ತಪಾಸಣೆ ನಡೆಸಿದರು. ಈ ವೇಳೆ ಭಾರಿ ಪ್ರಮಾಣದ ಡ್ರಗ್ಸ್‌ ಪತ್ತೆಯಾಗಿದೆ. ಉತ್ತರ ಪ್ರದೇಶ ನೋಂದಣಿ ಸಂಖ್ಯೆ ಹೊಂದಿದ್ದ ವಾಹನದಲ್ಲಿ ಈ ಡ್ರಗ್ಸ್‌ ಸಿಕ್ಕಿದೆ. ವಾಹನ ಹಿಂಬದಿಯಲ್ಲಿ 4 ಕೆ.ಜಿ.ಯಷ್ಟು ಮಾದಕ ವಸ್ತುಗಳನ್ನು ಅಡಗಿಸಿಡಲಾಗಿತ್ತು.

Share Post