ನಟ ಸಿದ್ಧಾರ್ಥ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು: ಸಮನ್ಸ್ ಜಾರಿ
ಚನ್ನೈ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ವಿರುದ್ಧ ನಟ ಸಿದ್ಧಾರ್ಥ್ ಮಾಡಿದ ಟ್ವೀಟ್ ಈಗ ಆತನಿಗೇ ಉರುಳಾಘಿದೆ. ಚನ್ನೈ ಪೊಲೀಸರು ಮಾನನಷ್ಟ ಮೊಕದ್ದೊಮೆ ಕೇಸ್ ದಾಖಲಿಸಿ ಸಮನ್ಸ್ ಕೂಡ ಜಾರಿ ಮಾಡಿದ್ದಾರೆ. ಸಿದ್ಧಾರ್ಥ್‌ಗೆ ವಿವಾಧಗಳೇನೂ ಹೊಸದೇನಲ್ಲ ದೇಶದಲ್ಲಿ ನಡೆಯುವ ಪ್ರತಿಯೊಂದು ವಿಚಾರಗಳಲ್ಲೂ ಮೂಗು ತೂರಿಸಿ ಅದರ ಬಗ್ಗೆ ತನ್ನದೇ ಆದ ಅಭಿಪ್ರಾಯವನ್ನು ತಿಳಿಸುತ್ತಾರೆ. ಹಾಗೇ ಟೀಕೆಗೂ ಕೂಡ ಒಳಗಾಗಿದ್ದಾರೆ.
ಪ್ರಸ್ತುತ ಸೈನಾ ನೆಹ್ವಾಲ್ ವಿರುದ್ಧ ಮಾಡಿರುವ ಟ್ವೀಟ್ ಸಿದ್ಧಾರ್ಥ್‌ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಮೊನ್ನೆ ಪಂಜಾಬ್‌ಗೆ ಪ್ರಧಾನಿ ಮೋದಿಯವರು ಭೇಟಿ ನೀಡಿದಾಗ ರೈತರ ಪ್ರತಿಭಟನೆಯಿಂದಾಗಿ ಭದ್ರತಾ ಲೋಪ ಉಂಟಾಯಿತು. ಈ ಘಟನೆಯನ್ನು ದೇಶಾದ್ಯಂತ ಹಲವಾರು ಗಣ್ಯರು ವಿಮರ್ಶಸಿದ್ದರು. ಇದರ ಬಗ್ಗೆ ಸೈನಾ ನೆಹ್ವಾಲ್ ಕೂಡ ತಮ್ಮ ಅಭಿಪ್ರಯಾವನು ಟ್ವೀಟ್ ಮೂಲಕ ” ಒಂದು ದೇಶ ತನ್ನ ಪ್ರಧಾನಿಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡರೆ, ಆ ದೇಶವನ್ನು ಸುರಕ್ಷಿತ ದೇಶವೆಂದು ಕರೆಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ಮೇಲೆ ನಡೆಸಿದ ಹೇಡಿತನದ ದಾಳಿಯನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ.” ಎಂದು ತಿಳಿಸಿದ್ದರು.
ಇದಕ್ಕೆ ನಟ ಸಿದ್ದಾರ್ಥ್ ಪ್ರತಿ ಟ್ವೀಟ್ ಮಾಡಿ “ಸೂಕ್ಷ್ಮ ‘ಕಾಕ್’ ವಿಶ್ವ ಚಾಂಪಿಯನ್, ನಾವು ಈಗಾಗಲೇ ರಕ್ಷಕರನ್ನು ಹೊಂದಿದ್ದೇವೆ. ದೇವರಿಗೆ ಧನ್ಯವಾದಗಳು. ಶೇಮ್ ಆನ್ ಯು” ಎಂದು ಬರೆದು ರಿಹಾನ್ನಾಗೆ ಹ್ಯಾಶ್ ಟ್ಯಾಗ್ ಮಾಡಿದ್ದರು. ಸಿದ್ದಾರ್ಥ್ ಟ್ವೀಟ್‌ನಲ್ಲಿ ಬಳಸಿರುವ ‘ಕಾಕ್’ ಎನ್ನುವ ಆಂಗ್ಲ ಪದವನ್ನು ಪುರುಷರ ಮರ್ಮಾಂಗಕ್ಕೆ ಬಳಸಲಾಗುತ್ತದೆ. ಇದೇ ಪದದಿಂದಾಗಿ ಸಿದ್ಧಾರ್ಥ್ ಟ್ವೀಟ್ ಈಗ ವಿವಾದಕ್ಕೆ ಸಿಕ್ಕಿಕೊಂಡಿದೆ.
ಈತನ ವಿರುದ್ಧ ಚನ್ನೈ ಕಮಿಷನರ್ ಕಚೇರಿಯಲ್ಲಿ ಎರಡು ದೂರುಗಳು ದಾಖಲಾಗಿವೆ. ಅಲ್ಲದೇ ಮಹಿಳಾ ಆಯೋಗ ಕೂಡ ಈತನ ವಿರುದ್ಧ ಸಿಡಿದೆದ್ದಿದ್ದಾರೆ. ಈ ಹಿನ್ನೆಲೆಯಲ್ಲು ಕಮಿಷನರ್ ಕಚೇರಿಯಿಂದ ಸಿದ್ದಾರ್ಥ್‌ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಜೊತೆಗೆ ಸೈನಾ ನೆಹ್ವಾಲ್ ಕುಟುಂಬದವರಿಂದ ಮಾನನಷ್ಟ ಮೊಕದ್ದೊಮೆ ಕೇಸ್ ಕೂಡ ದಾಖಲು ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಭಾರೀ ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ ನಟ ಸಿದ್ಧಾರ್ಥ್ ಕ್ಷಮೆ ಕೂಡ ಕೇಳಿದ್ರು. ಆದ್ರೆ ಕೋಪದಲ್ಲಿ ಕೊಯ್ದ ಮೂಗು ವಾಪಸ್ ಬಂದೀತೆ ಎನ್ನುವಂತಾಗಿದ ಸಿದ್ದಾರ್ಥ್ ಪರಿಸ್ಥಿತಿ.