ಪ್ರೀತಿಗೆ ಒಪ್ಪದಿದ್ದಕ್ಕೆ ಕುಟುಂಬದ 13 ಮಂದಿಯನ್ನು ಕೊಂದ ಯುವತಿ!
ಇಸ್ಲಾಮಾಬಾದ್; ಪ್ರೀತಿ ಮಾಡುತ್ತಿರುವವನ ಜೊತೆ ಮದುವೆ ಮಾಡಿಕೊಡಲು ಒಪ್ಪದಿದ್ದಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು ತನ್ನದೇ ಕುಟುಂಬದ 13 ಮಂದಿಗೆ ವಿಷವುಣಿಸಿ ಕೊಲೆ ಮಾಡಿದ್ದಾಳೆ.. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಖೈರ್‌ಪುರ್ ಜಿಲ್ಲೆಯಲ್ಲಿ ಇಂತಹದ್ದೊಂದು ಕೃತ್ಯ ನಡೆದಿದೆ.. ಘಟನೆ ಸಂಬಂಧ ಖೈರ್‌ಪುರ್ ಪೊಲೀಸರು ಆರೋಪಿ ಯುವತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..
ಶಾಯಿಸ್ತಾ ಎಂಬಾಕೆಯೇ ಕೊಲೆ ಮಾಡಿದ ಆರೋಪಿಯಾಗಿದ್ದಾಳೆ.. ಈಗ ಕೊಲೆಯಾದ ಕುಟುಂಬದ ಸದಸ್ಯೆಯೇ ಆಗಿದ್ದಾಳೆ.. ಈಕೆ ಅಮೀರ್ ಬಕ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು.. ಆದ್ರೆ ಇವರಿಬ್ಬರ ಮದುವೆಗೆ ಯುವತಿಯ ಮನೆಯವರು ಒಪ್ಪಿಲ್ಲ.. ಇದರಿಂದ ಆಕ್ರೋಶಗೊಂಡ ಶಾಯಿಸ್ತಾ ತನ್ನ ಕುಟುಂಬದವರೆಲ್ಲರಿಗೂ ಆಹಾರದಲ್ಲಿ ವಿಷ ಸೇರಿಸಿ ಕೊಟ್ಟಿದ್ದಾರೆ.. ಇದರಿಂದಾಗಿ ಶಾಯಿಸ್ತಾ ಕುಟುಂಬದ 13 ಮಂದಿಯೂ ಸಾವನ್ನಪ್ಪಿದ್ದಾರೆ.. ಹೀಗಾಗಿ ಶಾಯಿಸ್ತಾ ಹಾಗೂ ಆಕೆಯ ಪ್ರಿಯಕರ ಅಮೀರ್ ಬಕ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ..
ಆಹಾರದಲ್ಲಿ ವಿಷ ಬೆರೆಸಿ ಕೊಟ್ಟಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.. ನಾವಿಬ್ಬರು ಪ್ರೀತಿ ಮಾಡುತ್ತಿದ್ದೆವು. ನಮಗೆ ಮದುವೆ ಮಾಡುವಂತೆ ಮನವಿ ಮಾಡಿದೆವು.. ಆದ್ರೆ ನಮ್ಮ ಕುಟುಂಬದವರು ಒಪ್ಪಲಿಲ್ಲ.. ಈ ಕಾರಣಕ್ಕಾಗಿ ನಾವು ಈ ತೀರ್ಮಾನ ಕೈಗೊಂಡೆವು ಎಂದು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ.. ಈ ಭೀಕರ ಕೃತ್ಯ ಆಗಸ್ಟ್ 17 ರಂದು ಖೈರ್‌ಪುರ್ ಜಿಲ್ಲೆಯ ಪಿರ್‌ಜೋ ಗೋಥ್ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..