ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆಯ ಬಂಧನ
ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಟೋನಿ ಎಂಡ್ರಿ (೩೫) ಬಂಧಿತ ಆರೋಪಿ. ಆರೋಪಿ ಕೊಕೇನ್, ಎಂಡಿಎಂಎ ಮಾತ್ರೆಗಳನ್ನು ಮಾರುತ್ತಿದ್ದನೆಂದು ತಿಳಿದುಬಂದಿದೆ.
ಜಯನಗರ ಮೊದಲು ಹಂತದಲ್ಲಿ ಆರೋಪಿ ರಾಜಾರೋಷವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ದೊರೆಯುತ್ತಿದ್ದಂತೆ ದಾಳಿ ನಡೆಸಿದ ಪೊಲೀಸರು, ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 14.5 ಗ್ರಾಂ ಕೊಕೇನ್, 11.4 ಗ್ರಾಂ ಎಂಡಿಎಂಎ ಮಾತ್ರ ವಶಕ್ಕೆ ಪಡೆಯಲಾಗಿದೆ.