CrimeNational

ಮಣಿಪುರದಲ್ಲಿ ಹಿಂಸಾಚಾರಕ್ಕೆ ಕಾರಣವೇನು..?; ಅಂದು ನಡೆದಿದ್ದೇನು..?

ಇಂಫಾಲ್;‌ ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗಿ ಉದ್ವಿಘ್ನ ಪರಿಸ್ಥಿತಿ ಏರ್ಪಟ್ಟಿದೆ. ಘರ್ಷಣೆಯಲ್ಲಿ ಆರು ಮಂದಿ ಬಲಿಯಾಗಿದ್ದಾರೆ. ಇನ್ನೂ ಕೂಡಾ ಮಣಿಪುರದಲ್ಲಿ ಘರ್ಷಣೆಗಳ ಭೀತಿ ಇದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗುತ್ತಿದೆ. ಸೇನಾ ಸಿಬ್ಬಂದಿ ಹಾಗೂ ಅಸ್ಸಾಂ ರೈಫಲ್ಸ್‌ ತುಕಡಿಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕರ್ಫ್ಯೂ ಆದೇಶ ಜಾರಿ ಮಾಡಲಾಗಿದೆ.

ಅಷ್ಟಕ್ಕೂ ಈ ಘರ್ಷಣೆ ನಡೆಯೋದಕ್ಕೆ ಕಾರಣವೇನು..?
ಮಣಿಪುರದಲ್ಲಿ ಸುಮಾರು ಶೇಕಡಾ 53ರಷ್ಟು ಮೈತೇಯಿ ಸಮುದಾಯದವರಿದ್ದಾರೆ. ಇವರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲಿನ ಹೈಕೋರ್ಟ್‌ ಕೂಡಾ ನಾಲ್ಕು ವಾರಗಳಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸುವಂತೆ ಮಣಿಪುರ ಸರ್ಕಾರಕ್ಕೆ ಸೂಚನೆ ಕೊಟ್ಟಿತ್ತು. ಆದ್ರೆ ಇದಕ್ಕೆ ಬುಡಕಟ್ಟು ಸಮುದಾಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೇ ಕಾರಣಕ್ಕೆ ಈ ಗಲಭೆ ನಡೆದಿದೆ.

ಮಣಿಪುರದಲ್ಲಿ ಬಡಕಟ್ಟು ಸಮುದಾಯಗಳ ಜನರು ಶೇ.40ರಷ್ಟಿದ್ದಾರೆ. ಇವರು ಮೈತೇಯಿ ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿದ್ದರು. ಅಖಿಲ ಭಾರತದ ಮಣಿಪುರ ವಿದ್ಯಾರ್ಥಿ ಸಂಘಟನೆ ಈ ಹೋರಾಟದ ನೇತೃತ್ವ ವಹಿಸಿಕೊಂಡಿತ್ತು. ಇದೇ ಬುಧವಾರ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯದವರು ಸೇರಿ ಬುಡಕಟ್ಟ ಏಕತಾ ಜಾಥಾ ಮಾಡಿದ್ದರು.

ಮಣಿಪುರದ ವಿವಿಧ ಕಡೆ ಈ ಜಾಥಾಗಳನ್ನು ಹಮ್ಮಿಕೊಳ್ಳಲಾಗಿತ್ತು. ಚುರ್ಚಾಂದ್‌ಪುರ್‌ ಜಿಲ್ಲೆ ತೊರ್ಬುಂಗ್‌ ಎಂಬಲ್ಲಿ ಕೂಡಾ ಜಾಥಾ ನಡೆಯುತ್ತಿರುವಾಗ ಮಾರಾಕಾಸ್ತ್ರಗಳನ್ನು ಹೊಂದಿದ್ದ ಒಂದು ಗುಂಪು, ಮೈತೇಯಿ ಸಮುದಾಯದ ಕೆಲವರ ಮೇಲೆ ಹಲ್ಲೆ ನಡೆದಿತ್ತು. ಇದರಿಂದಾಗಿ ಮೈತೇಯಿ ಸಮುದಾಯದವರು ಪ್ರತೀಕಾರಕ್ಕೆ ಇಳಿದಿದ್ದರಿಂದ ಈ ಘರ್ಷಣೆಗಳು ನಡೆದಿದೆ.

ಈ ಘಟನೆ ನಂತರ ಎಂಟು ಜಿಲ್ಲೆಗಳಲ್ಲಿ ಗುಂಪು ಘರ್ಷಣೆಗಳು, ಹಲ್ಲೆಗಳು ನಡೆದಿವೆ. ಇದರಲ್ಲಿ ಸಿಲುಕಿ ಇದುವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸದ್ಯ ಕರ್ಫ್ಯೂ ಜಾರಿ ಮಾಡಿರುವುದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ.

Share Post