AstrologyLifestyle

ಅಕ್ಟೋಬರ್‌ 10ರಿಂದ ಈ 4 ರಾಶಿಯವರಿಗೆ ರಾಜಯೋಗ!

ಬೆಂಗಳೂರು; ಜ್ಯೋತಿಷ್ಯಶಾಸ್ತ್ರದಲ್ಲಿ ಎರಡು ಅಥವಾ ಹೆಚ್ಚಿನ ಗ್ರಹಗಳು ಒಂದು ರಾಶಿಯನ್ನು ಪ್ರವೇಶ ಮಾಡಿದರೆ ಅವರಿಗೆ ರಾಜಯೋಗ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತಿದೆ.. ಈ ಬಾರಿ ಅಂತಹ ಅವಕಾಶ ನಾಲ್ಕು ರಾಶಿಗಳವರಿಗೆ ಸಿಗುತ್ತಿದೆ.. ಅಕ್ಟೋಬರ್‌ 10ರಿಂದ ನಾಲ್ಕು ರಾಶಿಗಳವರಿಗೆ ರಾಜಯೋಗವಿದೆ ಎಂದು ಜ್ಯೋತಿಷ್ಯರು ಹೇಳುತ್ತಿದ್ದಾರೆ..
ದೀಪಾವಳಿಗೂ ಮೊದಲು ಗ್ರಹಗಳ ರಾಜ ಎಂದೇ ಕರೆಯಲ್ಪಡುವ ಬುಧ ಹಾಗೂ ರಾಕ್ಷಸರ ಗುರು ಶುಕ್ರ ತುಲಾ ರಾಶಿಗೆ ಪ್ರವೇಶ ಮಾಡಲಿವೆ.. ಇದರಿಂದಾಗಿ ತುಲಾರಾಶಿಯವರಿಗೆ ಲಕ್ಷ್ಮೀ ನಾಯರಾಣ ರಾಜಯೋಗ ಬರಲಲಿದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.. ಅಕ್ಟೋಬರ್ 10 ರಂದು ತುಲಾ, ಮಕರ, ಸಿಂಹ ಹಾಗೂ ಮೇಷ ರಾಶಿಯವರಿಗೆ ರಾಜಯೋಗ ಬರಲಿದೆ ಎಂದು ಜ್ಯೋತಿಷ್ಯರು ಹೇಳುತ್ತಿದ್ದಾರೆ.. ಇವರಿಗೆ ಲಕ್ಷ್ಮೀಯ ಅನುಗ್ರಹ ಸಿಗಲಿದ್ದು, ಧನಾಗಮವಾಗಲಿದೆ ಎಂದು ಹೇಳಲಾಗಿದೆ..
ಮೇಷ ರಾಶಿ;
ಮೇಷರಾಶಿಯವರಿಗೆ ಈ ಬಾರಿ ಲಕ್ಷ್ಮೀ ನಾರಾಯಣ ರಾಜಯೋಗ ಬರಲಿದ್ದು, ಸಾಕಷ್ಟು ಅದೃಷ್ಟಗಳನ್ನು ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.. ಮೇಷರಾಶಿಯವರಿಗೆ ಅಕ್ಟೋಬರ್‌ 10ರ ನಂತರ ಉದ್ಯೋಗದಲ್ಲಿ ಬಡ್ತಿಯಾಗಿ ದೊಡ್ಡ ಜವಾಬ್ದಾರಿಗಳು ಸಿಗಲಿವೆ.. ವೈವಾಹಿಕ ಜೀವನದ ಸಮಸ್ಯೆಗಳು ಕೊನೆಯಾಗುತ್ತವೆ.. ವಿದೇಶಕ್ಕೆ ಪ್ರವಾಸ ಮಾಡಬೇಕೆಂದುಕೊಳ್ಳುವವರು, ವಿದೇಶದಲ್ಲಿ ಕೆಲಸ ಹುಡುಕುತ್ತಿರುವವವರಿಗೆ ಈಗ ಶುಭ ಸಮಯವಾಗಿದೆ.. ಅವಿವಾಹಿತರು ಮದುವೆಯ ಭಾಗ್ಯ ಸಿಗಲಿದೆ.. ಆರ್ಥಿಕವಾಗಿಯೂ ಸಾಕಷ್ಟು ಉನ್ನತಿ ಸಿಗಲಿದೆ..
ತುಲಾ ರಾಶಿ;
ತುಲಾರಾಶಿಯವರಿಗೂ ಅಕ್ಟೋಬರ್‌ 10ರ ನಂತರ ಸಾಕಷ್ಟು ಅನುಕೂಲಗಳಾಗಲಿವೆ.. ಕಾಲಿಟ್ಟ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಸಿಗಲಿದೆ.. ಆರ್ಥಿಕ ಪರಿಸ್ಥಿತಿ ಕೂಡಾ ಸಾಕಷ್ಟು ಸುಧಾರಿಸಲಿದೆ.. ಸಮಾಜದಲ್ಲಿ ಗೌರವ ಹೆಚ್ಚಿಸಿಕೊಳ್ಳಲು ಇದಕ್ಕಿಂತ ಮತ್ತೊಂದು ಅವಕಾಶ ಸಿಗೋದಿಲ್ಲ.. ಉದ್ಯೋದಲ್ಲಿ ಬಡ್ತಿ ಸಿಗಲಿದೆ.. ಸಂಬಳ ಹೆಚ್ಚಾಗಲಿದ್ದು, ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುದಾರಣೆಯಾಗಲಿದೆ.. ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆ ಮಾಡುವಂತಹ ಅವಕಾಶಗಳು ಸಿಗುತ್ತವೆ.. ವ್ಯಾಪಾರ ವ್ಯವಹಾರಗಳು ಕೂಡಾ ಚೆನ್ನಾಗಿ ನಡೆಯಲಿವೆ..
ಮಕರ ರಾಶಿ;
ಮಕರ ರಾಶಿಯವರಿಗೆ ವ್ಯಾಪಾರ ವ್ಯವಹಾರ ಕೈಹಿಡಿಯಲಿದೆ.. ಅಕ್ಟೋಬರ್‌ 10ರ ನಂತರ ನಿಮಗೆ ಪರಿಚಯವಿರುವ ಯಾವುದೇ ವ್ಯವಹಾರ ಶುರು ಮಾಡಿದರೂ ಅದು ಲಾಭದಾಯವಾಗಿ ನಡೆಯುತ್ತದೆ.. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮಗೆ ಸಿಗಲಿವೆ.. ಆರ್ಥಿಕವಾಗಿ ಸಾಕಷ್ಟು ಸಬಲರಾಗೋಕೆ ಇದಕ್ಕಿಂತ ಬೇರೊಂದು ಅವಕಾಶ ಇಲ್ಲ. ಅಕ್ಟೋಬರ್‌ 10ರಿಂದ ಧನಾಗಮ ಹೆಚ್ಚಾಗುತ್ತದೆ.. ಅದನ್ನು ಉಳಿಸಿಕೊಂಡು ಬೇರೆ ಕಡೆ ಹೂಡಿಕೆ ಮಾಡುತ್ತಾ ಬಂದರೆ ನೀವು ಬಹುಬೇಗ ಶ್ರೀಮಂತರಾಗಲು ಅವಕಾಶವಾಗುತ್ತದೆ..
ಸಿಂಹ ರಾಶಿ;
ಸಿಂಹರಾಶಿಯವರಿಗೂ ಈ ಬಾರಿ ರಾಜಯೋಗವಿದೆ.. ಅದೃಷ್ಟ ಕೈಗೂಡಲಿದೆ.. ಹಿಡಿದ ಕೆಲಸಗಳೆಲ್ಲಾ ಚೆನ್ನಾಗಿ ಆಗುತ್ತವೆ.. ನೆಗೆಗುದಿಗೆ ಬಿದ್ದ ಕೆಲಸಗಳು ಕೂಡಾ ಮುಗಿಯುತ್ತವೆ.. ಲಾಭ ತಂದುಕೊಡುತ್ತವೆ.. ಉದ್ಯಮಿಗಳಿಗೆ ಇದು ಒಳ್ಳೆಯ ಸಮಯ.. ನಿಮ್ಮ ಉದ್ಯಮ ವಿಸ್ತರಿಸಬೇಕು ಎಂದುಕೊಂಡಿದ್ದರೆ ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿವೆ.. ವ್ಯಾಪಾರದಲ್ಲಿ ಸಾಕಷ್ಟು ಲಾಭವಾಗಿ ನಿಮ್ಮ ಆಸೆಗಳನ್ನೆಲ್ಲಾ ಈಡೇರಿಸಿಕೊಳ್ಳಿದ್ದೀರಿ..

Share Post