ಪೊಲೀಸರ ದಾಳಿಯಿಂದ ವ್ಯಕ್ತಿ ಸಾವು ಎಂಬ ಗಂಭೀರ ಆರೋಪ!
ಬೆಂಗಳೂರು; ಪೊಲೀಸ್ ಇನ್ಸ್‌ಪೆಕ್ಟರ್ ನಡೆಸಿದ ಹಲ್ಲೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.. ಜಮೀನು ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೋಣನಕುಂಟೆ ಠಾಣೆ ಎಸ್‌ಐ ಪಾಪಪ್ಪ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದು, ಇದರಿಂದ ಗಂಭಿರವಾಗಿ ಗಾಯಗೊಂಡಿದ್ದ ಆತ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ..
ರಾಮಸ್ವಾಮಿ ಎಂಬುವವರೇ ಸಾವನ್ನಪ್ಪಿದವರು.. ಪೊಲೀಸರು ಹಲ್ಲೆ ಮಾಡಿದ್ದರಿಂದಲೇ ನನ್ನ ಗಂಡ ಸಾವನ್ನಪ್ಪಿದ್ದಾರೆ ಎಂದು ರಾಮಸ್ವಾಮಿ ಪತ್ನಿ ಮುನಿಯಮ್ಮ ಆರೋಪ ಮಾಡಿದ್ದು, ಈ ಬಗ್ಗೆ ಕೇಸ್ ಕೂಡಾ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.. ಕೊತ್ತನೂರು ಎಂಬಲ್ಲಿ ಮೃತ ರಾಮಸ್ವಾಮಿ ಹಾಗೂ ನಿರ್ಮಿತಿ ಕೇಂದ್ರ ನಡುವೆ ಜಮೀನು ವಿವಾದವಿದೆ.. ಎರಡು ತಿಂಗಳ ಹಿಂದೆ ನಿರ್ಮಿತಿ ಕೇಂದ್ರದವರು ಜಮೀನಿನಲ್ಲಿದ್ದ ನೀಲಗಿರಿ ಮರಗಳನ್ನು ಕತ್ತರಿಸಲು ಮುಂದಾಗಿದ್ದರು.. ಈ ವೇಳೆ ಈ ಜಮೀನು ನಮ್ಮದು ಎಂದು ರಾಮಸ್ವಾಮಿ ಅಡ್ಡ ಬಂದಿದ್ದರು.. ಈ ವೇಳೆ ಪೊಲೀಸರು ರಾಮಸ್ವಾಮಿ, ಅವರ ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ..
ಕೋಣನಕುಂಟೆ ಠಾಣೆ ಇನ್ಸ್‌ಪೆಕ್ಟರ್ ಪಾಪಣ್ಣ ಮತ್ತು ಸಿಬ್ಬಂದಿ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ.. ರಾಮಸ್ವಾಮಿಯವರಿಗೆ ಬಿಪಿ, ಶುಗರ್ ಇತ್ತು.. ಹೀಗಾಗಿ ಅವರು ತೀವ್ರ ನಿತ್ರಾಣಗೊಂಡಿದ್ದರು.. ಪೊಲೀಸರೇ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ರಾಮಸ್ವಾಮಿ ಮೂರು ದಿನದ ಹಿಂದೆ ಸಾವನ್ನಪ್ಪಿದ್ದಾರೆ.. ಎರಡು ತಿಂಗಳ ಹಿಂದೆ ಪೊಲೀಸರು ತೀವ್ರ ಹಲ್ಲೆ ನಡೆಸಿದ್ದರಿಂದಲೇ ನನ್ನ ಗಂಡ ಸಾವನ್ನಪ್ಪಿದ್ದಾನೆ ಎಂದು ರಾಮಸ್ವಾಮಿ ಪತ್ನಿ ಈಗ ಆರೋಪ ಮಾಡುತ್ತಿದ್ದಾರೆ.. ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ನಿಜ ಏನು ಅನ್ನೋದು ಬಯಲಿಗೆ ಬರಬೇಕಾಗಿದೆ..