BengaluruCrime

ಗರ್ಲ್‌ಫ್ರೆಂಡ್‌ ಭೇಟಿಗೆ ಬಂದಿದ್ದ ತಮಿಳುನಾಡಿನ ನಕ್ಸಲೈಟ್‌!; ಮುಂದೇನಾಯ್ತು..?

ಬೆಂಗಳೂರು; ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತೆಯನ್ನು ನೋಡೋದಕ್ಕಾಗಿ ತಮಿಳುನಾಡಿನಿಂದ ನಕ್ಸಲೈಟ್‌ ಬಂದಿದ್ದ.. ಆಕೆಯ ಭೇಟಿಗೆ ಹೋಗುವ ಸಂದರ್ಭದಲ್ಲಿ ಆ ನಕ್ಸಲೈಟ್‌ ಸಿಕ್ಕಿಬಿದ್ದಿದ್ದಾನೆ.. ಆತ ಸಿಕ್ಕಿದ್ದೇ ಒಂದು ರೋಚಕ ಕತೆಯಾಗಿದೆ.. ಚೆನ್ನೈನ ಅನಿರುದ್ಧ್‌ ರಾಜನ್‌ ಎಂಬ ನಕ್ಸಲನೇ ಸಿಕ್ಕಿಬಿದ್ದಾತ. ಈತನ ಬಳಿಯಿಂದ ಹಲವಾರು ಪೆನ್‌ಡ್ರೈವ್‌ಗಳು, ನಕಲಿ ಆಧಾರ್‌ ಕಾರ್ಡ್‌ಗಳು, ಮೊಬೈಲ್‌ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ..
ನಕ್ಸಲ್‌ ಅನಿರುದ್ಧ್‌ ರಾಜನ್‌ ಗುರುವಾರ ಬೆಳಗ್ಗೆ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.. ಆರೋಪಿ ಅನಿರುದ್ಧ್‌ ಯಾರಿಗೂ ಗೊತ್ತಾಗದ ರೀತಿಯಲ್ಲಿ ಸಾರಿಗೆ ಬಸ್‌ಗಳನ್ನೇ ಬಳಸಿ ಓಡಾಡುತ್ತಿದ್ದ.. ಆಗಾಗ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಬರುತ್ತಿದ್ದ.. ಇದನ್ನು ಗಮನಿಸಿದ್ದ ಪೊಲೀಸ್‌ ಇನ್ಫಾರ್ಮರ್ಸ್‌, ಪೊಲೀಸರಿಗೆ ಮಾಹಿತಿ ನೀಡಿದ್ದರು.. ಗುರುವಾರ ಆತ ಬಂದಿರುವುದನ್ನು ಬಿಎಂಟಿಸಿ ಬಸ್‌ಗಾಗಿ ಕಾಯುತ್ತಿರುವುದನ್ನು ಗಮನಿಸಿದ ಇನ್ಫಾರ್ಮರ್ಸ್‌, ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಅನುಮಾನದ ಮೇರೆಗೆ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ನಕ್ಸಲ್‌ ಅನ್ನೋದು ಖಾತ್ರಿಯಾಗಿದೆ..
ಅನಿರುದ್ಧ್‌ ರಾಜನ್‌ ಬಿಕಾಂ ಪದವೀಧರನಾಗಿದ್ದು, 2018ರಲ್ಲಿ ಎಡಪಂಥಕ್ಕೆ ಆಕರ್ಷಿತನಾಗಿದ್ದ.. ನಿಷೇಧಿತ ಸಿಪಿಐ ಸಂಘಟನೆ ಜೊತೆಗೆ ಆತ ಗುರುತಿಸಿಕೊಂಡಿದ್ದ.. ನಕ್ಸಲೀಯ ಕಮಾಂಡರ್‌ಗಳ ವಿಶ್ವಾಸ ಗಳಿಸಿದ್ದ ಆತ, ಉತ್ತರ ಭಾರತದ ಮಾವೋವಾದಿಗಳ ನಡುವೆ ಈ ಕೊರಿಯರ್‌ ಪಾತ್ರ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು, ಆತನಿಗೆ ಕರ್ನಾಟಕದ ನಂಟಿಗೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ..

Share Post