ಕೋಲಾರದ ಶಿಕ್ಷಕನ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ 5000 ನಗ್ನ ಚಿತ್ರಗಳು!
ಕೋಲಾರ; ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕನ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ 5000ಕ್ಕೂ ಹೆಚ್ಚು ನಗ್ನ ಚಿತ್ರಗಳು ಹಾಗೂ ವಿಡಿಯೋಗಳು ಪತ್ತೆಯಾಗಿವೆ.. ಚಿತ್ರಕಲಾ ಶಿಕ್ಷಕ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಮೊಬೈಲ್‌ನಲ್ಲಿ ನೋಡುತ್ತಾ ಆನಂದಪಡುತ್ತಿದ್ದ.. ಈ ಬಗ್ಗೆ ಆತನ ವಿರುದ್ಧ ಕೇಸ್ ದಾಖಲಾಗಿತ್ತು.. ಇದನ್ನು ರದ್ದು ಮಾಡಬೇಕೆಂದು ಆತ ಹೈಕೋರ್ಟ್ ಮೊರೆ ಹೋಗಿದ್ದ.. ಆದ್ರೆ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಿರಾಕರಣೆ ಮಾಡಿದೆ.. ಇದರಿಂದಾಗಿ ಕಾಮುಕ ಶಿಕ್ಷಕನಿಗೆ ಸಂಕಷ್ಟ ಶುರುವಾಗಿದೆ..
ಕೋಲಾರ ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಎಂಬಾತನ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.. ಶಿಕ್ಷಕನ ಬಳಿ ಇದ್ದ 5 ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ಮಾಡಿದಾಗ, ಅದರಲ್ಲಿ ವಿದ್ಯಾರ್ಥಿನಿಯರ ಸಾವಿರಾರು ನಗ್ನ ವಿಡಯೋಗಳು ಸಿಕ್ಕಿದ್ದವು.. ಆದ್ರೆ ಶಿಕ್ಷಕ ತನ್ನ ವಿರುದ್ಧದ ಎಫ್‌ಐಆರ್ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದ.. ಆದ್ರೆ ಅದಕ್ಕೆ ಹೈಕೋರ್ಟ್ ನಿರಾಕರಣೆ ಮಾಡಿದೆ.. ಶಿಕ್ಷಕನ ಕೃತ್ಯ ಅಸಭ್ಯ ಹಾಗೂ ನೀಚ ಕೆಲಸ ಎಂದು ಹೈಕೋರ್ಟ್ ಹೇಳಿದೆ..