ಉದ್ಯೋಗ ಕೊಡಿಸುವ ನೆಪದಲ್ಲಿ ಅತ್ಯಾಚಾರ; ಆರೋಪಿ ಅರೆಸ್ಟ್
ಬೆಂಗಳೂರು; ಯುವತಿಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಬ್ಲ್ಯಾಕ್‌ಮೇಲ್ ಮಾಡುತಿದ್ದ ವ್ಯಕ್ತಿಯನ್ನ ಅಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೂಲತಃ ಟೆಕ್ಕಿ. ಈತ ಇನ್ಸ್ಟಾಗ್ರಾಂನಲ್ಲಿ ಮೋನಿಕಾ ಹಾಗೂ ಮ್ಯಾನೇಜರ್ ಎಂಬ ಎರಡು ನಕಲಿ ಖಾತೆ ತೆರದಿದ್ದ. ಇನ್ಸ್ಟಾಗ್ರಾಂ ಮೂಲಕ ಕೆಲಸ ಕೊಡಿಸುವುದಾಗಿ ಮೆಸೆಜ್ ಮಾಡಿ ಅವರನ್ನ ನಂಬಿಸಿ ಅವರನ್ನ ಕರೆಸಿ ಕೊಳ್ಳುತ್ತಿದ್ದ. ತನ್ನ ಮಾತಿನಿಂದ ಮೋಡಿ ಮಾಡಿ ನಂತರ ಅವರನ್ನ ಬೇರೆ ಸ್ಥಳಕ್ಕೆ ಕರೆಸಿಕೊಂಡು ಅತ್ಯಾಚಾರ ಮಾಡಿ ವಿಡೀಯೋ ಮಾಡಿಕೊಳ್ಳತ್ತಿದ್ದ. ನಂತರ ಇದೇ ವಿಡೀಯೋ ಬಳಸಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡ್ತಾ ಇದ್ದ ಎನ್ನಲಾಗಿದೆ.
ಯುವತಿಬ್ಬರ ದೂರಿನ ಮೇಲೆ ಪೋಲೀಸರು ಆತನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.