30 ಲಕ್ಷ ರೂ. ಆಸೆಗೆ ಕಿಡ್ನಿ ದಾನ ಮಾಡಿದ ಆಟೋ ಚಾಲಕ!; ಪಂಗನಾಮ ಹಾಕಿದ ವಂಚಕರು!
ವಿಜಯವಾಡ; ಫೇಸ್ ಬುಕ್‌ನಲ್ಲಿ ಕಿಡ್ನಿ ದಾನ ಮಾಡಿದರೆ 30 ಲಕ್ಷ ರೂಪಾಯಿ ನೀಡೋದಾಗಿ ಬಂದಿದ್ದ ಜಾಹೀರಾತು ನಂಬಿ ಆಂಧ್ರ ಪ್ರದೇಶದ ವಿಜಯವಾಡದ ಯುವಕನೊಬ್ಬ ಮೋಸ ಹೋಗಿದ್ದಾನೆ.. ಒಂದು ಕಿಡ್ನಿ ಕಳೆದುಕೊಂಡಿರುವ ಯುವಕ, ಇತ್ತ ಹಣವೂ ಸಿಗದೇ ಪರದಾಡುತ್ತಿದ್ದಾನೆ..
ಇದನ್ನೂ ಓದಿ; ಕಾಲೇಜು ವಿದ್ಯಾರ್ಥಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ..!
31 ವರ್ಷ ವಯಸ್ಸಿನ ಮಧುಬಾಬು ಎಂಬ ಯುವಕ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ.. ಆದ್ರೆ ಯಾವುದೋ ಕಾರಣಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದ್ದು, ಲೋನ್ ಅಪ್ಲಿಕೇಷನ್‌ಗಳ ಮೂಲಕ ಹಲವು ಕಡೆ ಸಾಲ ಮಾಡಿದ್ದ.. ಅದನ್ನು ಕಟ್ಟೋದಕ್ಕೆ ಪರದಾಡುತ್ತಿದ್ದ.. ಇದೇ ವೇಳೆ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ನೋಡಿ ಒಂದು ಕಿಡ್ನಿ ಮಾರಿ ಸಮಸ್ಯೆಗಳನ್ನು ತೀರಿಸಿಕೊಳ್ಳೋಣ ಎಂದು ಬಯಸಿದ್ದ..
ಇದನ್ನೂ ಓದಿ; ಹಾಲಿನ ಟ್ಯಾಂಕರ್-ಡಬಲ್ ಡೆಕ್ಕರ್ ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ 18 ಮಂದಿ ದುರ್ಮರಣ!
ಜಾಹೀರಾತಿನಲ್ಲಿ ಕೊಟ್ಟಿದ್ದ ಫೋನ್ ನಂಬರ್‌ಗೆ ಕರೆ ಮಾಡಿದ್ದ ಮಧುಬಾಬು, ಮಧ್ಯವರ್ತಿಯೊಬ್ಬರ ನಂಬರ್ ಕೊಟ್ಟಿದ್ದರು.. ಆ ಮಧ್ಯವರ್ತಿ ವಿಜಯವಾಡದ ವಿಜಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆಸಿಕೊಂಡು ಆಪರೇಷನ್ ಮಾಡಿಸಿ ಕಿಡ್ನಿ ಕದ್ದಿದ್ದಾನೆ.. ಆದ್ರೆ 30 ಲಕ್ಷ ರೂಪಾಯಿ ಹಣ ಮಾತ್ರ ಕೊಟ್ಟಿಲ್ಲವಂತೆ..
ಇದನ್ನೂ ಓದಿ; ಏನಿದು ʻರಾಮನಗರʼ ಗುದ್ದಾಟ..?; ಹೆಸರು ಬದಲಿಸಿದರೆ ಅಭಿವೃದ್ಧಿ ಆಗುತ್ತಾ..?
ಕಿಡ್ನಿ ದಾನವಾಗಿ ಪಡೆದುಕೊಂಡ ವ್ಯಕ್ತಿಗೂ ಆಟೋ ಡ್ರೈವರ್ ಮಧುಬಾಬುಗೂ ಯಾವುದೇ ರಕ್ತ ಸಂಬಂಧ ಇಲ್ಲ.. ಆದರೂ ನಕಲಿ ದಾಖಲೆ ಸೃಷ್ಟಿಸಿ, ಮಧುಬಾಬು ಕಿಡ್ನಿ ತೆಗೆದು ಬೇರೊಬ್ಬ ವ್ಯಕ್ತಿಗೆ ಕಸಿ ಮಾಡಿದ್ದಾರಂತೆ.. ಹಣದ ಆಸೆಗೆ ಕಿಡ್ನಿ ಮಾರಿದ ಮಧುಬಾಬು ಈಗ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡುತ್ತಿದ್ದಾನೆ..