CrimeHealthNational

ಪೆನ್ನು ಚುಚ್ಚಿಕೊಂಡಿದ್ದರಿಂದ ನಾಲ್ಕು ವರ್ಷದ ಹೆಣ್ಣು ಮಗು ಸಾವು!

ಹೈದರಾಬಾದ್‌; ತೆಲಂಗಾಣ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.. ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಭದ್ರಾಚಲಂನಲ್ಲಿ ಈ ಘೋರ ದುರಂತ ನಡೆದಿದ್ದು, ಪೆನ್ನು ನಾಲ್ಕು ವರ್ಷದ ಮಗುವಿನ ಜೀವವನ್ನೇ ಬಲಿ ತೆಗೆದುಕೊಂಡಿದೆ.

ಭದ್ರಾಚಲಂ ಪಟ್ಟಣದ ಸುಭಾಷ್ ನಗರದಲ್ಲಿ ನಾಲ್ಕು ವರ್ಷದ ರಿಯಾನ್ಸಿಕಾ ಪೆನ್ ಚುಚ್ಚಿದ್ದರಿಂದ ಸಾವನ್ನಪ್ಪಿದ್ದಾಳೆ. ತನ್ನ ಮನೆಯಲ್ಲಿ ಹಾಸಿಗೆಯ ಮೇಲೆ ಕುಳಿತು ಪುಸ್ತಕಗಳಲ್ಲಿ ಆಟವಾಡುತ್ತಿದ್ದಾಗ ರಿಯಾನ್ಶಿಕಾ ಕೆಳಗೆ ಬಿದ್ದಿದ್ದಾಳೆ. ಆಗ ಪೆನ್‌ ಆಕೆಯ ಕಿವಿಯ ಮೇಲ್ಭಾಗದಲ್ಲಿ ಬಲವಾಗಿ ಚುಚ್ಚಿದೆ.. ಇದರಿಂದಾಗಿ ಆಕೆಗೆ ತೀವ್ರ ರಕ್ತಸ್ರಾವವಾಗಿದೆ..

ಪೋಷಕರು ಕೂಡಲೇ ಮಗುವನ್ನು ಖಮ್ಮಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ನಾಲ್ಕು ಇಂಚು ಒಳಹೊಕ್ಕಿದ್ದ ಪೆನ್ನನ್ನು ಹೊರತೆಗೆದರು. ಶಸ್ತ್ರಚಿಕಿತ್ಸೆಯ ನಂತರ, ಮೆದುಳಿನ ಸೋಂಕಿನಿಂದ ಮಗು ಸಾವನ್ನಪ್ಪಿತು. ರಿಯಾನ್ಶಿಕಾ ಸಾವಿನ ಸುದ್ದಿ ಕೇಳಿ ಪೋಷಕರು ಕಣ್ಣೀರು ಹಾಕಿದ್ದಾರೆ.

Share Post