ನಡು ರಾತ್ರಿಯಲ್ಲಿ ಆಕೆಯ ಕೋಣೆ ಪ್ರವೇಶಿಸಿದ 15ರ ಬಾಲಕ!; ಮುಂದೇನಾಯ್ತು..?
ಜೈಪುರ; ನಡು ರಾತ್ರಿ ವೇಳೆ ಆ ಬಾಲಕಿಯ ಕೋಣೆಗೆ ಪ್ರವೇಶಿಸಿದ 15 ವರ್ಷದ ಬಾಲಕ ಈಗ ದೊಡ್ಡ ಸುದ್ದಿಯಾಗಿದ್ದಾನೆ.. ಯಾಕಂದ್ರೆ, ಕುಟುಂಬಸ್ತರ ಕಣ್ತಪ್ಪಿಸಿ, ತಮ್ಮ ಮನೆಯ ರಸ್ತೆಯಲ್ಲೇ ಇರುವ ಕ್ಲಾಸ್‌ಮೇಟ್ ಹುಡಿಗಿಯ ಮನೆಗೆ ಕಳ್ಳತನವಾಗಿ ನುಗ್ಗಿದ್ದ ಆತ, ಆಕೆಯ ಕೊಠಡಿ ಪ್ರವೇಶಿಸಿದ್ದ.. ಅಲ್ಲಿ ಆಕೆಯೂ ಆತನಿಗೆ ಸಹಕರಿಸಿದ್ದಳು.. ಆದ್ರೆ ಮುಂದಾಗಿದ್ದೇ ದೊಡ್ಡ ದುರಂತ..!
ರಾಜಸ್ಥಾನದ ಜೋಧಪುರದ ಗ್ರಾಮೀಣ ಕ್ಷೇತ್ರದ ಕಸಬೆಯಲ್ಲಿ ಈ ಘಟನೆ ನಡೆದಿದೆ.. 15 ವರ್ಷದ ಬಾಲಕ ಚೇತನ್, ಭಾರತ ಟಿಟ್ವೆಂಟಿ ವಿಶ್ವಕಪ್ ದಿನ ರಾತ್ರಿ ತನ್ನ ಪೋಷಕರ ಕಣ್ತಪ್ಪಿಸಿ, ಮನೆಗೆ ಹತ್ತಿರವೇ ಇರುವ ಕ್ಲಾಸ್‌ಮೇಟ್ ಮನೆಗೆ ಹೋಗುತ್ತಾನೆ.. ಎಲ್ಲರೂ ಮಲಗಿದ್ದ ವೇಳೆಯಲ್ಲಿ ಚೇತನ್ ಆ ಮನೆಗೆ ಕಳ್ಳತನದಿಂದ ನುಗ್ಗಿ, ತನ್ನ ಕ್ಲಾಸ್‌ಮೇಟ್ ಹುಡುಗಿ ರೂಮ್‌ನಲ್ಲಿರುತ್ತಾನೆ.. ಆಕೆಯೊಂದಿಗೆ ಚೇತನ್ ಇರುವಾಗ, ಬಾಲಕಿಯ ಮನೆಯವರಿಗೆ ವಿಷಯ ಗೊತ್ತಾಗುತ್ತದೆ.. ಇದ್ರಿಂದಾಗಿ ಚೇತನ್ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾನೆ.. ಓಡುತ್ತಿರುವಾಗ ಜಮೀನೊಂದರ ಬೇಲಿಗೆ ಹಾಕಲಾಗಿದ್ದ ವಿದ್ಯುತ್ ಸ್ಪರ್ಶ ವಾಗಿದ್ದರಿಂದ ಆತ ಸಾವನ್ನಪ್ಪಿದ್ದಾನೆ.. ಅನಂತರ ಆ ಬಾಲಕಿಯ ಪೋಷಕರು, ಚೇತನ್ ಮೃತದೇಹವನ್ನು ಹೆದ್ದಾರಿಯ ಪಕ್ಕದಲ್ಲಿ ಬಿಸಾಕಿ ಎಸ್ಕೇಪ್ ಆಗಿದ್ದಾರೆ..
ಭಾನುವಾರ ಬೆಳಗ್ಗೆ ಚೇತನ್ ಮೃತದೇಹ ರಸ್ತೆ ಪಕ್ಕ ಸಿಕ್ಕಿದೆ.. ಚೇತನ್ ಪೋಷಕರು ಇದನ್ನು ಕೊಲೆ ಎಂದು ಆರೋಪ ಮಾಡಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡರೆ ಮಾತ್ರ ಅಂತ್ಯಸಂಸ್ಕಾರ ಮಾಡೋದಾಗಿ ಪಟ್ಟು ಹಿಡಿದಿದ್ದರು.. ಕೊನೆಗೆ ಇದಕ್ಕೆ ಮಣಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.. ಈ ಸಂಬಂಧ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ..