ಇಂಡೋನೇಷ್ಯಾ ಫುಟ್ಬಾಲ್ ಸ್ಟೇಡಿಯಂ ನೆಲಸಮಕ್ಕೆ ನಿರ್ಧಾರ
ಜಕಾರ್ತ; ಅಕ್ಟೋಬರ್ ೧ರಂದು ಕಾಲ್ತುಳಿದಿಂದ ೧೩೦ ಮಂದಿ ಸಾವಿಗೆ ಸಾಕ್ಷಿಯಾಗಿದ್ದ ಇಂಡೋನೇಷ್ಯಾದ ಫುಟ್ಬಾಲ್ ಕ್ರೀಡಾಂಗಣ ನೆಲಸಮ ಮಾಡಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೋ ಮಾಹಿತಿ ನೀಡಿದ್ದಾರೆ.
ಇಂದು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾದ ಮುಖ್ಯಸ್ಥ ಜಿಯಾನಿ ಇನ್‌ಫಾಂಟಿನೋ ಅವರನ್ನು ಇಂಡೋನೇಷ್ಯಾ ಅಧ್ಯಕ್ಷರು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅನಂತರ ಈ ನಿರ್ಧಾರ ಪ್ರಕಟಿಸಿದ್ದಾರೆ. ಈಗಿನ ಕ್ರೀಡಾಂಗಣ ನೆಲಸಮ ಮಾಡುತ್ತೇವೆ. ಅನಂತರ ಅದೇ ಸ್ಥಳದಲ್ಲಿ ಕ್ರೀಡಾಂಗಣ ಮರು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಕ್ಟೋಬರ್ 1 ರಂದು ಫುಟ್‌ಬಾಲ್ ಪಂದ್ಯದ ಬಳಿಕ ಗಲಭೆ ಸಂಭವಿಸಿತ್ತು. ಈ ವೇಳೆ ಪೊಲೀಸರು ಸ್ಟೇಡಿಯಂನಲ್ಲಿ ಅಶ್ರುವಾಯು ಪ್ರಯೋಗಿಸಿದ್ದು, ಈ ವೇಳೆ ಕಾಲ್ತುಳಿತ ಉಂಟಾಗಿ 130 ಮಂದಿ ಸಾವನ್ನಪ್ಪಿದ್ದರು.