CrimeNational

ದರೋಡೆ ಮಾಡಲು ಬಂದಾತನಿಂದ 70 ವರ್ಷದ ವೃದ್ಧೆ ಮೇಲೆ ಅತ್ಯಾಚಾರ!

ಕೇರಳ; ಮನೆಯಲ್ಲಿ ದರೋಡೆ ಮಾಡಲು ಬಂದ ವ್ಯಕ್ತಿಯೊಬ್ಬ 70 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ಕೇರಳದಲ್ಲಿ ನಡೆದಿದೆ.. ಅಲ್ಲಪ್ಪುಳ ಜಿಲ್ಲೆಯ ಕಾಯಂಕುಲಂ ಎಂಬಲ್ಲಿ ಈ ಘಟನೆ ನಡೆದಿದೆ.. ಆರೋಪಿಯನ್ನು 29 ವರ್ಷದ ಧನೇಶ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ; ಹೊಸ ಸಿಎಂ ಹುಡುಕುತ್ತಿದೆಯಾ ಕಾಂಗ್ರೆಸ್‌ ಹೈಕಮಾಂಡ್‌?; ಯಾರಿಗೆ ಅವಕಾಶ ಇದೆ..?

ಮನೆಯಲ್ಲಿ ಮಹಿಳೆ ಒಬ್ಬರೇ ವಾಸಿಸುತ್ತಾರೆ.. ಇದನ್ನು ಅರಿತಿದ್ದ ಆರೋಪಿ ದರೋಡೆ ಮಾಡಲೆಂದು ಮನೆಗೆ ನುಗ್ಗಿದ್ದಾನೆ.. ನಂತರ ಬಾಗಿಲನ್ನು ಒಳಗಿನಿಂದ ಲಾಕ್‌ ಮಾಡಿಕೊಂಡ ಆರೋಪಿ, ವೃದ್ಧೆ ಕಣ್ಣಿಗೆ ಖಾರದಪುಡಿ ಎರಚಿದ್ದಾನೆ.. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.. ಸಾಲದೆಂಬಂತೆ ಮನೆಯಲ್ಲಿದ್ದ ಏಳು ಪವನ್‌ ಚಿನ್ನಾಭರಣ ದರೋಡೆ ಮಾಡಿಕೊಂಡು ಹೋಗಿದ್ದಾನೆ.. ಅದನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ಅತ್ಯಾಚಾರದ ವಿಚಾರ ಗೊತ್ತಾಗಿದೆ..

ಇದನ್ನೂ ಓದಿ; ಜೈಲು ಹಿಂಗೆಲ್ಲಾ ಇರುತ್ತಾ..?; ಮಜಾ ಮಾಡ್ತಿದ್ದಾರಾ ದರ್ಶನ್‌..?

ಮಹಿಳೆ ಮೊಬೈಲ್‌ ಕೂಡಾ ಕದ್ದೊಯ್ದಿದ್ದರಿಂದ ಆಕೆ ಯಾರಿಗೂ ಫೋನ್‌ ಮಾಡೋದಕ್ಕೆ ಆಗಿಲ್ಲ.. ಬೆಳಗ್ಗೆ ಅಕ್ಕಪಕ್ಕದ ಮನೆಯವರು ಮಹಿಳೆಯ ನರಳಾಟ ಕೇಳಿ ಬಾಗಿಲು ಒಡೆದು ಆಕೆಯನ್ನು ರಕ್ಷಣೆ ಮಾಡಿದ್ದರು.. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದರು.. ಸದ್ಯ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..

ಇದನ್ನೂ ಓದಿ; ಪತ್ನಿಯ ಕುಡಿತ ಬಿಡಿಸಲು ರಿಹಬ್‌ಗೆ ಸೇರಿಸಿದ ಗಂಡ; ಕೆಲಸದವನೊಂದಿಗೆ ಓಡಿಹೋದ ಪತ್ನಿ!

 

Share Post