InternationalNational

ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಏಳು ದಿನ ಕ್ವಾರಂಟೈನ್:‌ ಕೇಂದ್ರ

ದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ. ಕೊರೊನಾ  ಮೂರನೇ ತಳಿ ಹಾಗೂ ಓಮಿಕ್ರಾನ್‌ ತಡೆಗೆ ಕೇಂದ್ರ ನಿಯಮಾವಳಿಗಳನ್ನು ಪ್ರಕಟಿಸಿದೆ. ಈಗಾಗಲೇ ದೇಶದಲ್ಲಿ ಹಲವು ರಾಜ್ಯಗಳಲ್ಲಿ ಕೊರೊನಾ ಹೆಚ್ಚಿರುವ ಪ್ರದೇಶಗಳನ್ನು ಗುರ್ತಿಸಿ ರೆಡ್‌ ಝೋನ್‌ ಎಂದು ಘೋಷಿಸಿದೆ. ಇದರ ಜೊತೆಗೆ ಈಗ ವಿದೇಶಿ ಪ್ರಯಾಣಿಕರಿಗೂ ಕೆಲವು ಕಠಿಣ ಕ್ರಮಗಳನ್ನು ರೂಪಿಸಿದೆ.

ವಿದೇಶಿ ಪ್ರಯಾಣಿಕರಿಗೆ ಏಳು ದಿನಗಳ ಹೋಂ ಕ್ವಾರಂಟೈನ್‌ ಕಡ್ಡಾಯ ಮಾಡಿದೆ. ಕೊರೊನಾ ಅಲೆ ಹೆಚ್ಚಿರುವ ಪ್ರದೇಶದಿಂದ ಬರುವವರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ. ವರದಿ ಬಂದ ಬಳಿಕವಷ್ಟೇ ಅವರ ಮುಂದಿನ ಪ್ರಯಾಣಕ್ಕೆ ಸೂಚಿಸಲಾಗುತ್ತದೆ. ಕೊರೊನಾ ವರದಿ ಆಧರಿಸಿ ಪ್ರಯಾಣಿಕರನ್ನು ಏರ್ಪೋರ್ಟ್‌ನಿಂದ ಕಳಿಸಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ಹೊರಗಿನಿಂದ ಬಂದವರಿಗೆ ಹೋಂ ಕ್ವಾರಂಟೈನ್‌ ಮಾತ್ರ ಕಡ್ಡಾಯಗೊಳಿಸಿದೆ.

Share Post