CinemaCrime

ಮಗಳೇ ಎನ್ನುತ್ತಲೇ ಕಿರುಕುಳ ಕೊಟ್ಟರು!; ಹಿರಿಯ ನಟನ ವಿರುದ್ಧ ಆರೋಪ!

ತಿರುವನಂತಪುರಂ; ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಲಯಾಳಂ ಚಿತ್ರರಂಗದಲ್ಲಿ ಈಗ ಹೆಚ್ಚು ಚರ್ಚೆಯಾಗುತ್ತಿದೆ.. ಈ ಬೆನ್ನಲ್ಲೇ ಯುವ ನಟಿಯೊಬ್ಬರು ಹಿರಿಯ ನಟರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದು, ಮಲಯಾಳಂ ಚಿತ್ರರಂಗದಲ್ಲಿಸ ಸಂಚಲನ ಮೂಡಿದೆ.. ಯುವ ನಟಿ ರೇವತಿ ಸಂಪತ್‌ ಈ ಆರೋಪ ಮಾಡಿದ್ದಾರೆ.. 2016ರಲ್ಲಿ ಮಲಯಾಳಂ ಹಿರಿಯ ನಟ ಸಿದ್ದಿಕಿ ಅವರು ನನಗೆ ಲೈಂಗಿನ ಕಿರುಕುಳ ನೀಡಿದ್ದರು ಎಂದು ರೇವತಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ; ಜೈಲು ಹಿಂಗೆಲ್ಲಾ ಇರುತ್ತಾ..?; ಮಜಾ ಮಾಡ್ತಿದ್ದಾರಾ ದರ್ಶನ್‌..?

ಸಾಮಾಜಿಕ ಜಾಲತಾಣದಲ್ಲಿ ಸಿದ್ದಿಕಿ ಅವರು ನನ್ನನ್ನು ಸಂಪರ್ಕ ಮಾಡಿ ಮಗಳೇ ಎಂದು ಕರೆಯುತ್ತಿದ್ದರು.. ನನ್ನ 12ನೇ ತರಗತಿ ಮುಗಿದ ಮೇಲೆ ನಟನೆಯಲ್ಲಿ ಆಸಕ್ತಿ ಇದೆಯೇ ಎಂದು ಕೇಳಿದ್ದರು.. 21ನೇ ವಯಸ್ಸಿನಲ್ಲಿ ನಾನು ಸುಖಮೈರಿಕ್ಕಟ್ಟೆ ಎಂಬ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿದ್ದೆ. ಅನಂತರ ಸಿದ್ದಿಕಿ ಅವರು ಮಾತನಾಡಬೇಕೆಂದು ಹೋಟೆಲ್‌ ಗೆ ಕರೆದಿದ್ದರು.. ನನ್ನನ್ನು ರೂಮ್‌ನಲ್ಲಿ ಲಾಕ್‌ ಮಾಡಿ ದೈಹಿಕವಾಗಿ ಬಳಸಿಕೊಂಡಿದ್ದರು.. ಅಂದು ನಾನು ಹೇಗೋ ಅಲ್ಲಿಂದ ಹೊರಬಿದ್ದಿದೆ.. ಆಗಲೇ ನಾನು ಎಲ್ಲರಿಗೂ ಹೇಳುತ್ತೇನೆ ಎಂದು ಹೇಳಿದ್ದೆ.. ನಿನ್ನೆ ಮಾತು ಯಾರು ನಂಬುತ್ತಾರೆ ಎಂದು ಅವರು ಪ್ರಶ್ನೆ ಮಾಡಿದ್ದರು ಎಂದು ನಟಿ ರೇವತಿ ಹೇಳಿದ್ದಾರೆ..

ಇದನ್ನೂ ಓದಿ; ಹೊಸ ಸಿಎಂ ಹುಡುಕುತ್ತಿದೆಯಾ ಕಾಂಗ್ರೆಸ್‌ ಹೈಕಮಾಂಡ್‌?; ಯಾರಿಗೆ ಅವಕಾಶ ಇದೆ..?

ಇನ್ನು ಈ ಆರೋಪ ಬರುತ್ತಿದ್ದಂತೆ ಹಿರಿಯ ನಟ ಸಿದ್ದಿಕಿ ಅವರು ಮಲಯಾಳಂ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.. ಅಧ್ಯಕ್ಷ ಮೋಹನ್​ಲಾಲ್ ಅವರಿಗೆ ಇಮೇಲ್ ಮೂಲ ರಾಜೀನಾಮೆ ರವಾನೆ ಮಾಡಿದ್ದಾರೆ..

Share Post