CrimeDistricts

ಕಾರಿನ ತುಂಬಾ ಇತ್ತು ಹಣ; ಎಷ್ಟು ಕೋಟಿ ಗೊತ್ತಾ..?

ಗದಗ; ಚುನಾವಣೆ ಮುಗಿದಿದೆ. ಹೊಸ ಸರ್ಕಾರ ರಚನೆಯೂ ಆಗಿದೆ. ಆದರೂ, ಹಣದ ಅಕ್ರಮ ವರ್ಗಾವಣೆ ಮುಂದುವರೆದೇ ಇದೆ. ಕಾರೊಂದರಲ್ಲಿ ಸುಮಾರು 1.70 ಕೋಟಿ ರೂಪಾಯಿ ಹಣ ಸಿಕ್ಕಿದೆ. ಇದಕ್ಕೆ ಸೂಕ್ತ ದಾಖಲೆಗಳು ನೀಡದ ಕಾರಣ ಪೊಲೀಸರು ಈ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಗದಗ ಜಿಲ್ಲೆ ನರಗುಂದ ಪಟ್ಟಣದ ಮೂಲಕ ಹಾದುಹೋಗುತ್ತಿದ್ದ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಅಪಾರ ಪ್ರಮಾಣದ ಹಣ ಇದ್ದದ್ದು ಪತ್ತೆಯಾಗಿದೆ.  ಈ ಕಾರು ಬಾಗಲಕೋಟೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು ಎನ್ನಲಾಗಿದೆ.

ಹುಬ್ಬಳ್ಳಿ ಮೂಲದ ವ್ಯಾಪಾರಿ ವಿಕ್ರಮ್ ಸಿಂಗ್ ಎಂಬುವವರಿಗೆ ಸೇರಿದ ಹಣ ಎಂದು ತಿಳಿದುಬಂದಿದೆ.

Share Post