BengaluruPolitics

ಕಾಂಗ್ರೆಸ್‌ನಿಂದ ಪೇಸಿಎಂ ಪ್ರೊಟೆಸ್ಟ್‌; ಪೋಸ್ಟರ್‌ ಅಂಟಿಸಿದ ನಾಯಕರು

ಬೆಂಗಳೂರು; ರಾಜ್ಯ ಸರ್ಕಾರದ ವಿರುದ್ಧ ನಲವತ್ತು ಪರ್ಸೆಂಟ್‌ ಕಮೀಷನ್‌ ಆರೋಪ ಮಾಡಿರುವ ಕಾಂಗ್ರೆಸ್‌, ಪೇಸಿಎಂ ಎಂಬ ಪೋಸ್ಟರ್‌ ಅಭಿಯಾನವನ್ನು ಮುಂದುವರೆಸಿದೆ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ನೂರಾರು ನಾಯಕರು ಕಾರ್ಯಕರ್ತರು ಗೋಡೆಗಳಿಗೆ ಪೋಸ್ಟರ್‌ಗಳನ್ನು ಅಂಟಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಎರಡು ದಿನಗಳ ಹಿಂದೆ ಕಾಂಗ್ರೆಸ್‌ ಪೇಸಿಎಂ ಎಂಬ ಪೋಸ್ಟರ್‌ಗಳನ್ನು ಅಂಟಿಸಿತ್ತು. ಈ ಸಂಬಂಧ ಯುವ ಕಾಂಗ್ರೆಸ್‌ನ ಗಗನ್‌ ಯಾದವ್‌ ಹಾಗೂ ಬಿ.ಆರ್‌.ನಾಯ್ಡು ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್‌ನ ಹಿರಿಯ ನಾಯಕರೇ ಪೋಸ್ಟರ್‌ ಅಂಟಿಸಿ, ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

Share Post