BengaluruCrime

ರಿಯಲ್‌ ಎಸ್ಟೇಟ್‌ ಕಂಪನಿಗೆ 17 ಕೋಟಿ ದೋಖಾ; 4 ನೌಕರರ ಅರೆಸ್ಟ್‌!

ಬೆಂಗಳೂರು; ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ 17 ಕೋಟಿ ರೂಪಾಯಿ ವಂಚನೆ ಮಾಡಿದ್ದ ನಾಲ್ವರು ನೌಕರರನ್ನು ಬಂಧಿಸಲಾಗಿದೆ.. ಕಂಪನಿಗೆ ಸೇರಿದ 17 ಕೋಟಿ ರೂಪಾಯಿ ಹಣವನ್ನು ಬೇರೆ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಳ್ಳಲಾಗಿತ್ತು.. ಬೇರೆ ಬೇರೆ ಸಮಯದಲ್ಲಿ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಲಾಗಿದೆ ಎಂದು ತಿಳಿದುಬಂದಿದ್ದರಿಂದ ಕಂಪನಿ ಮಾಲೀಕರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನಾಲ್ವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ..
ಪ್ರಾಪ್ಕೇರ್‌ ರಿಯಲ್‌ ಎಸ್ಟೇಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ ಈ ಹಣ ದುರುಪಯೋಗ ಆಗಿದೆ ಎಂಬ ಆರೋಪ ಕೇಳಿಬಂದಿದೆ.. ಕಂಪನಿಯ ಅಕೌಂಟೆಂಟ್‌ ಹರಿಕೃಷ್ಣರೆಡ್ಡಿ, ಕರುಣಾನಿಧಿ ಸೇರಿ ನಾಲ್ವರು ಅಂದರ್‌ ಆಗಿದ್ದಾರೆ.. ಹರಿಕೃಷ್ಣ ರೆಡ್ಡಿ ಲೇಡಿಸ್ ಬಾರ್ ಹುಚ್ಚು ಹೆಚ್ಚಾಗಿದ್ದು, ಅದಕ್ಕಾಗಿ ಈ ಹಣವನ್ನು ಕದ್ದಿದ್ದ ಎನ್ನಲಾಗಿದೆ.. ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡು ಅಲ್ಲಿಂದ ಹಣವನ್ನು 190 ಪಬ್ ಮಾಲೀಕರು ಹಾಗೂ ಮ್ಯಾನೇಜರ್​ಗಳಿಗೆ ಕಳುಹಿಸಲಾಗಿದೆ..
ಈ ಬಗ್ಗೆ ಪ್ರಾಪ್ಕೇರ್ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕ ಮೆತುಕು ಶ್ರೀನಿವಾಸ್‌ ಅವರು ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.. ಗೋವಾ, ಬಾಂಬೆ ಪಬ್‌ಗಳಿಗೆ ಈ ಹಣವನ್ನು ಸುರಿದಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಹರಿಕೃಷ್ಣಾರೆಡ್ಡಿ ಬಳಿಯಿಂದ 3 ಕೋಟಿ ರೂಪಾಯಿ ಬೆಲೆಬಾಳುವ ಚಿನ್ನಾಭರಣ, ನಗದು ಹಾಗೂ ಎರಡು ಮನೆಗಳ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ..

Share Post