NationalPolitics

ಸಿಪಿಐಎಂ ನಾಯಕ ಸೀತಾರಾಮ್‌ ಯೆಚೂರಿ ನಿಧನ!

ನವದೆಹಲಿ; ಸಿಪಿಐಎಂ ನಾಯಕ ಸೀತಾರಾಮ್‌ ಯೆಚೂರಿ ಅವರು ಇಂದು ನಿಧನರಾಗಿದ್ದಾರೆ.. 72 ವರ್ಷದ ಅವರು ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ. ತೀವ್ರ ಉಸಿರಾಟದ ಸಮಸ್ಯೆ ಇದ್ದುದರಿಂದ ಏಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ಸಾವನ್ನಪ್ಪಿದ್ದಾರೆ..
ತೀವ್ರ ಉಸಿರಾಟದ ತೊಂದರೆ ಇದ್ದುದರಿಂದ ಅವರನ್ನ ಆಕ್ಸಿಜನ್‌ ಸಪೋರ್ಟ್‌ನಲ್ಲಿ ಇರಿಸಲಾಗಿತ್ತು.. ಇನ್ನು ತೀವ್ರ ಜ್ವರ ಕೂಡಾ ಅವರನ್ನು ಕಾಡುತ್ತಿತ್ತು. ನ್ಯೂಮೋನಿಯಾ ಸಮಸ್ಯೆಯೂ ಇದ್ದುದರಿಂದ ಅವರ ಸ್ಥಿತಿ ಗಂಭೀರವಾಗಿತ್ತು.. ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸೀತಾರಾಮ್‌ ಯೆಚೂರಿ ಅವರು ಸಿಪಿಐಎಂ ಪ್ರಧಾನ ಕಾರ್ಯದರ್ಶಿಯಾಗಿದ್ದರು.

Share Post