National

ಅಯೋಧ್ಯಾ ಧಾಮ್‌ ರೈಲು ನಿಲ್ದಾಣಕ್ಕೆ ಮೋದಿ ಚಾಲನೆ

ಅಯೋಧ್ಯೆ; ಪ್ರಧಾನಿ ನರೇಂದ್ರ ಮೋದಿ ಇಂದು ಆಯೋಧ್ಯೆಗೆ ಆಗಮಿಸಿದ್ದಾರೆ. ಅವರು ಇಂದು ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಅಯೋಧ್ಯಾ ಧಾಮ್‌ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು. ಇದೇ ವೇಳೆ ಎರಡು ಅಮೃತ್‌ ಭಾರತ್‌ ರೈಲುಗಳು ಹಾಗೂ 6 ವಂದೇ ಭಾರತ್‌ ರೈಲುಗಳಿಗೆ ಚಾಲನೆ ಕೂಡಾ ನೀಡಿದರು.

ಆಯೋಧ್ಯೆ ಮಾರ್ಗದ ರೈಲುಗಳಲ್ಲದೆ, ದೇಶದ ಇತರೆಡೆ ಸಂಚರಿಸುವ ವಂದೇ ಭಾರತ್‌ ರೈಲುಗಳಿಗೂ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ಕೊಟ್ಟರು. ಅದರಲ್ಲಿ ಕರ್ನಾಟಕದಲ್ಲಿ ಸಂಚರಿಸುವ ನಾಲ್ಕು ರೈಲುಗಳು ಕೂಡಾ ಸೇರಿವಿಎ. ಮಂಗಳೂರಿನಿಂದ ಗೋವಾ, ಬೆಂಗಳೂರಿನಿಂದ ಕೊಯಮತ್ತೂರು ತೆರಳುವ ವಂದೇ ಭಾರತ್‌ ಹಾಗೂ ಮಾಲ್ಡಾ-ಬೆಂಗಳೂರು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಕೂಡಾ ಮೋದಿ ಚಾಲನೆ ನೀಡಿದ್ದಾರೆ.

 

Share Post