ಬ್ರೇಕಪ್ ಹೇಳಿದ ಪ್ರಿಯತಮೆ; ಖರ್ಚು ಮಾಡಿದ ಹಣದ ಜಿಎಸ್‌ಟಿ ಬಿಲ್ ಕಳುಹಿಸಿದ ಪ್ರಿಯಕರ!
ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ.. ಪ್ರಾಣ ಪ್ರಾಣಕ್ಕೆ ಕೊಟ್ಟು ಪ್ರೀತಿ ಮಾಡ್ತೀವಿ ಅನ್ನುವವರು ಕೂಡಾ ಸಣ್ಣಪುಟ್ಟ ಕಾರಣಗಳಿಗೆ ಬ್ರೇಕಪ್ ಮಾಡಿಕೊಳ್ಳುತ್ತಾರೆ.. ಅನಂತರ ಇಬ್ಬರೂ ಬೇರೆ ಬೇರೆ ಸಂಗಾತಿಗಳನ್ನು ಹುಡುಕಿಕೊಳ್ಳುತ್ತಾರೆ.. ಇಂತಹವು ಈಗ ಸಾಮಾನ್ಯ.. ಅಂದಹಾಗೆ ಪ್ರೀತಿ ಮಾಡುವಾಗ ಇಬ್ಬರೂ ಸಿಕ್ಕ ಸಿಕ್ಕಲ್ಲಿ ಸುತ್ತಾಡಿರುತ್ತಾರೆ.. ಪ್ರಿಯಕರ ತನ್ನ ಪ್ರಿಯತಮೆಗಾಗಿ ಕೇಳಿದ್ದೆಲ್ಲಾ ತಿನ್ನಿಸಿರುತ್ತಾನೆ, ಕೇಳಿದ್ದೆಲ್ಲಾ ಕೊಡಿಸಿರುತ್ತಾನೆ.. ಕೊನೆಗೆ ಬ್ರೇಕಲ್ ಆದಾಗ ಆ ಪ್ರೇಮಿ ಎಲ್ಲವನ್ನೂ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂರುತ್ತಾನೆ.. ಆದ್ರೆ ಇಲ್ಲೊಬ್ಬ, ಬ್ರೇಕಪ್ ಆಗುತ್ತಿದ್ದಂತೆ ತನ್ನ ಎಕ್ಸ್ ಗರ್ಲ್‌ಫ್ರೆಂಡ್ ಬಳಿ ತಾನ ಕೊಟ್ಟಿದ್ದೆಲ್ಲಾ ವಾಪಸ್ ಕೊಡು ಎಂದು ಕೇಳಿದ್ದಾನೆ.. ಖರ್ಚಿನ ಲೆಕ್ಕ ಹಾಕಿ, ಅದಕ್ಕೆ ಜಿಎಸ್‌ಟಿ ಸೇರಿ ಬಿಲ್ ಕಳುಹಿಸಿದ್ದಾನೆ..
ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೊಂದು ಪೋಸ್ಟ್ ಹರಿದಾಡುತ್ತಿದೆ.. ಸಿಎ ಮಾಡಿರುವ ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿಗೆ ಬ್ರೇಕಪ್‌ಗೂ ಮೊದಲು ಮಾಡಿರುವ ಖರ್ಚುಗಳ ದೊಡ್ಡ ಪಟ್ಟಿಯನ್ನು ರವಾನಿಸಿದ್ದಾನೆ.. ಅದಕ್ಕೆ ಜಿಎಸ್‌ಟಿ ಕೂಡಾ ಸೇರಿಸಿದ್ದಾನೆ.. ಪ್ರಯಾಣಕ್ಕಾಗಿ ಬಳಸಿದ ಕ್ಯಾಬ್ ವೆಚ್ಚಗಳು, ಸಿನಿಮಾ ಟಿಕೆಟ್‌ಗೆ ಖರ್ಚು ಮಾಡಿರುವುದು, ಕಾಫಿ, ಚಾಕೊಲೇಟ್, ಪಾಪ್‌ಕಾರ್ನ್ ಇತ್ಯಾದಿಗಳನ್ನು ಪಟ್ಟಿ ಮಾಡಿ ಅದಕ್ಕೆಲ್ಲಾ ಎಷ್ಟು ಖರ್ಚಾಗಿದೆ ಎಂಬುದನ್ನು ಲೆಕ್ಕಹಾಕಿ ಬಿಲ್ ಕಳುಹಿಸಿದ್ದಾನೆ.. ಖರ್ಚಿನ ಎಕ್ಸೆಲ್ ಶೀಟ್ ಮಾಡಿ ಹುಡುಗಿಗೆ ಕಳುಹಿಸಿ ಪ್ರತಿ ತಿಂಗಳ ಖರ್ಚನ್ನೂ ಸೇರಿಸಿದ್ದು, ವಾಪಸ್ ಕೊಡುವಂತೆ ಕೇಳಿದ್ದಾನೆ..