Crime

ಮದುವೆಯಾದ ಎರಡೇ ವಾರಕ್ಕೆ ನವವಧು ಅನುಮಾನಾಸ್ಪದ ಸಾವು

ಹಾಸನ: ಎರಡು ವಾರದ ಹಿಂದೆ ಮದುವೆಯಾಗಿದ್ದ ನವವಧುವೊಬ್ಬರು ಅನುಮಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.

ಅರಕಲಗೂಡು ತಾಲ್ಲೂಕಿನ ಹೊಳಲಗೋಡು ಗ್ರಾಮದ ಫಿಜಾ ಖಾನಂ ಅವರೇ ಮೃತ ದುರ್ದೈವಿ. ಈಕೆಯನ್ನು ೧೮ ದಿನಗಳ ಹಿಂದೆ ಹಾಸನ ಪಟ್ಟಣದ ಶಾಹಿಲ್‌ ಆಹ್ಮದ್‌ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಆದರೆ, ಫಿಜಾ ಖಾನಂ, ಸ್ನಾದ ಕೋಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಪತಿಯ ಮನೆಯವರು ಗ್ಯಾಸ್‌ ಗೀಸರ್‌ನಿಂದ ಗ್ಯಾಸ್‌ ಲೀಕ್‌ ಮಾಡಿ ಫಿಜಾ ಖಾನಂಳನ್ನು ಸಾಯಿಸಿದ್ದಾರೆ ಅಂತ ಮೃತಳ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಪೆನ್ಷನ್‌ ಮೊಹಲ್ಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share Post