CrimeNational

ಏನು ಡೌನ್‌ಲೋಡ್‌ ಮಾಡಿದೆ ಎಂದು ಕೇಳಿದ್ದಕ್ಕೆ ಮಗಳು ಆತ್ಮಹತ್ಯೆ!

ಮುಂಬೈ; ಇತ್ತೀಚೆಗೆ ಮಕ್ಕಳು, ದೊಡ್ಡವರು ಸೇರಿ ಎಲ್ಲರೂ ಮೊಬೈಲ್‌ ದಾಸರಾಗಿದ್ದಾರೆ.. ಮೊಬೈಲ್‌ ಇಲ್ಲ ಅಂದರೆ ಮದುಕೇ ನಡೆಯೋದಿಲ್ಲವೇನೋ ಎಂಬ ಹಂತಕ್ಕೆ ಬಂದಿದ್ದಾರೆ.. ಮುಂಬೈನಲ್ಲಿ 16 ಬಾಲಕಿ ಕೂಡಾ ಮೊಬೈಲ್‌ ಗೆ ಅಡಿಕ್ಟ್‌ ಆಗಿದ್ದು, ಸಿಕ್ಕಿದ್ದೆಲ್ಲಾ ಡೌನ್‌ಲೋಡ್‌ ಮಾಡುತ್ತಿದ್ದಳು.. ನೀನು ಏನು ಡೌನ್‌ಲೋಡ್‌ ಮಾಡಿದ್ದೀಯಾ ಎಂದು ತಂದೆ ಪ್ರಶ್ನೆ ಮಾಡಿದ್ದಕ್ಕೆ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಾಲಿಯಲ್ಲಿ ಈ ಘಟನೆ ನಡೆದಿದೆ.. 16 ವರ್ಷ ಬಾಲಕಿ ತನ್ನ ಮೊಬೈಲ್‌ನಲ್ಲಿ ಸ್ನ್ಯಾಪ್‌ ಚಾಟ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಳು.. ಇದನ್ನು ನೋಡಿ ತಂದೆ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.. ಅಂತಹ ಅಪ್ಲಿಕೇಷನ್‌ಗಳೆಲ್ಲಾ ಡೌನ್‌ಲೋಡ್‌ ಮಾಡಬಾರದು, ಬಳಸಬಾರದು ಎಂದು ಬೈದಿದ್ದಾರೆ.. ಜೊತೆಗೆ ಅಪ್ಲಿಕೇಷನ್‌ ಡಿಲೀಟ್‌ ಮಾಡುವಂತೆ ಹೇಳಿದ್ದಾರೆ.. ಇದರಿಂದಾಗಿ ಕೋಪಗೊಂಡ ತನ್ನ ಕೊಠಡಿಗೆ ಹೋದ ಬಾಲಕಿ, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..

ಮಲಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು.. ಆದ್ರೆ ಕೋಣೆಗೆ ಹೋಗಿ ನೋಡಿದರೆ ಆಕೆ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ..

Share Post