CrimeDistricts

ಮಹಿಳಾ ಪಿಎಸ್‌ಐ ಮನೆಗೇ ಬೆಂಕಿ ಇಟ್ಟ ದುಷ್ಕರ್ಮಿಗಳು

ಹಾಸನ; ಮಹಿಳಾ ಪಿಎಸ್‌ಐ ಅವರ ನಿವಾಸಕ್ಕೇ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಕೊಣನೂರು ಠಾಣೆ ಪಿಎಸ್‌ಐ ಆಗಿರುವ ಶೋಭಾ ಭರಮಕ್ಕನವರ್‌ ಅವರ ಮನೆಯೇ ದುಷ್ಕರ್ಮಿಗಳ ದಾಳಿಗೆ ತುತ್ತಾಗಿರುವುದು. ಅರಕಲಗೂಡು ತಾಲ್ಲೂಕಿನ ಕೊಣನೂರಿನಲ್ಲೇ ಶೋಭಾ ಭರಮಕ್ಕನವರ್‌ ವಾಸವಿದ್ದರು. ಅವರು ಊರಿಗೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ.

ಶೋಭಾ ಅವರು ಕೊಣನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ರಜೆ ಮೇಲೆ ಅವರು ಊರಿಗೆ ಹೋಗಿದ್ದಾ ದುಷ್ಕರ್ಮಿಗಳು, ಮನೆಯ ಕಿಟಕಿ ಹೊಡೆದಿದ್ದಾರೆ. ಒಳಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಮನೆಯಲ್ಲಿದ್ದ ಲ್ಯಾಪ್‌ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆ, ಪೀಠೋಪಕಣಗಳು ಬೆಂಕಿಗಾಹುತಿಯಾಗಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಶೋಭಾ ಭರಮಕ್ಕನವರ್ ಮೂರುವರೆ ತಿಂಗಳ ಹಿಂದಷ್ಟೇ ಜಾವಗಲ್ ಪೊಲೀಸ್ ಠಾಣೆಯಿಂದ ಕೊಣನೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು.

Share Post