Cinema

YASH; ಬೆಳೆದು ಬಂದ ದಾರಿ ಮರೆಯದ ನಟ ಯಶ್‌; ಸ್ಟಾರ್‌ ಆದರೂ ಸರಳ ನಡೆ!

ಬೆಂಗಳೂರು; ಕೆಜಿಎಫ್‌ ನಿಂದಾಗಿ ದೇಶ ವಿದೇಶದಲ್ಲಿ ಹೆಸರು ಮಾಡಿದ ನಟ ಯಶ್‌… ಕನ್ನಡದಲ್ಲಿ ಹಲವಾರು ಹಿಟ್‌ ಚಿತ್ರಗಳನ್ನು ಕೊಟ್ಟಿರುವ ಯಶ್‌, ಕೆಜಿಎಫ್‌ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ.. ಇಷ್ಟು ದೊಡ್ಡ ಖ್ಯಾತಿ, ಹೆಸರು, ಆಸ್ತಿ, ಅಂತಸ್ತು ಗಳಿಸಿದ್ದರೂ ಅವರು ಹಿಂದಿನ ದಿನಗಳ ಮರೆತಿಲ್ಲ.. ಈ ಕಾರಣಕ್ಕಾಗಿಯೇ ಯಶ್‌ ಈಗಲೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದಾರೆ.. ಇದಕ್ಕೊಂದು ಉದಾಹರಣೆ ಇಲ್ಲಿರುವ ಫೋಟೋಗಳು..

ಇದನ್ನೂ ಓದಿ; Nidagal Hills; ಬೆಂಕಿಯುಂಡೆಯಾಯ್ತು ನಿಡಗಲ್‌ ಬೆಟ್ಟ; ಇದು ಭಸ್ಮಾಸುರರ ಕೆಲಸ!

ಸಣ್ಣ ಅಂಗಡಿಯಲ್ಲಿ ಚಾಕೊಲೇಟ್‌ ಖರೀದಿ;

ಸಣ್ಣ ಅಂಗಡಿಯಲ್ಲಿ ಚಾಕೊಲೇಟ್‌ ಖರೀದಿ; ಯಶ್‌ ಈಗ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇದರ ನಡುವೆಯೂ ಫ್ಯಾಮಿಲಿಗೆ ಸಮಯ ಕೊಡುತ್ತಾರೆ. ಹೆಂಡತಿ ಮಕ್ಕಳೊಂದಿಗೆ ಸುತ್ತಾಟ ನಡೆಸುತ್ತಾರೆ.. ಹೀಗೆಯೇ ಅವರು ಪತ್ನಿ ರಾಧಿಕಾ ಪಂಡಿತ್​ ಮತ್ತು ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಜೊತೆ ಹೊರಗಡೆ ಸುತ್ತಾಡಲು ಹೋಗಿದ್ದರು.. ಈ ವೇಳೆ ಯಶ್‌ ಸರಳತೆ ಮೆರೆದಿದ್ದಾರೆ. ಅವರು ಸಣ್ಣ ಚಿಲ್ಲರೆ ಅಂಡಗಿಯೊಂದಕ್ಕೆ ತೆರಳಿದ್ದಾರೆ.. ಅಲ್ಲಿ ಮಕ್ಕಳಿಗಾಗಿ ಚಾಕೊಲೇಟ್‌ಗಳನ್ನು ಖರೀದಿ ಮಾಡಿದ್ದಾರೆ. ಇದೇ ವೇಳೆ ನಟಿ ಹಾಗೂ ಯಶ್‌ ಪತ್ನಿ ರಾಧಿಕಾ ಪಂಡಿತ್‌ ಕೂಡಾ ಕ್ಯಾಂಡಿ ಒಂದನ್ನು ಖರೀದಿಸಿ ತಿಂದಿದ್ದಾರೆ. ಈ ಫೋಟೋಗಳು ಈಗ ಎಲ್ಲೆಡೆ ವೈರಲ್‌ ಆಗುತ್ತಿವೆ.

ಇದನ್ನೂ ಓದಿ; Guava Leaves; ಸೀಬೆ ಎಲೆಗಳ ಟೀ ಕುಡಿದರೆ ಸಕ್ಕರೆ ಮಟ್ಟ ನಿಯಂತ್ರಣ!

ಕೋಟಿ ಕೋಟಿ ಆಸ್ತಿ ಇದ್ದರೂ ಸರಳವಾಗಿರಲು ಪ್ರಯತ್ನ;

ಕೋಟಿ ಕೋಟಿ ಆಸ್ತಿ ಇದ್ದರೂ ಸರಳವಾಗಿರಲು ಪ್ರಯತ್ನ; ನಟ ಯಶ್‌ ಒಬ್ಬ ಸಾಮಾನ್ಯ ಬಸ್‌ ಡ್ರೈವರ್‌ ಮಗ.. ಚಿತ್ರರಂಗ ಎಂಟ್ರಿ ಕೊಡುವುದಕ್ಕಾಗಿ ಅವರು ಸಾಕಷ್ಟು ಕಷ್ಟ ಪಟ್ಟಿದ್ದರು.. ಕಿರುತೆರೆಯಲ್ಲಿ ಕೆಲಸ ಮಾಡುವಾಗ ಊಟಕ್ಕೂ ಪರದಾಡಿದ್ದಿದೆ.. ಆದ್ರೆ ಈಗ ಅವರು ಸ್ಟಾರ್‌ ನಟ.. ಒಂದು ಸಿನಿಮಾಗೆ ಹಲವಾರು ಕೋಟಿ ತೆಗೆದುಕೊಳ್ಳುತ್ತಾರೆ.. ಕೋಟಿ ಕೋಟಿ ಆಸ್ತಿ ಇದೆ.. ವೈಭವದ ಜೀವನ ನಡೆಸುತ್ತಿದ್ದಾರೆ ಕೂಡಾ. ಇದರ ನಡುವೆಯೂ ಅವರು ಹಳೆಯದನ್ನು ಮರೆಯುವುದಿಲ್ಲ. ಸಮಯ ಸಿಕ್ಕಾಗಲೆಲ್ಲಾ ಸಾಮಾನ್ಯ ಜನರೊಂದಿಗೆ ಕಳೆಯುತ್ತಾರೆ.. ಸಾಮಾನ್ಯರೊಂದಿಗೆ ಸಮಾಲೋಚನೆ ಮಾಡುತ್ತಾರೆ.. ಜೊತೆಗೆ ಸಣ್ಣ ಪುಟ್ಟ ವ್ಯಾಪಾರಿಗಳ ಬಳಿ ಹೋಗಿ ಅಲ್ಲಿರುವ ವಸ್ತುಗಳನ್ನು ಖರೀದಿ ಮಾಡುತ್ತಾರೆ.. ಅದೇ ರೀತಿ ಯಶ್‌ ದಂಪತಿ ಕುಟುಂಬದ ಸಮೇತ ಹೊರಗೆ ಹೋದಾಗ ಸಾಮಾನ್ಯರಲ್ಲಿ ಸಾಮಾನ್ಯರಂತೆ ಅಂಗಡಿಯೊಂದಕ್ಕೆ ತೆರಳು ಚಾಕೋಲೇಟ್‌ಗಳನ್ನು ಖರೀದಿಸಿದ್ದಾರೆ. ಈ ಮೂಲಕ ಚಿಕ್ಕ ವಯಸ್ಸಿನಲ್ಲಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ; 6 Habits of Successful People; ಯಶಸ್ವಿ ವ್ಯಕ್ತಿಗಳ ಆರು ಅಭ್ಯಾಸಗಳು; ಇವೇ ಯಶಸ್ಸಿನ ಸೂತ್ರಗಳು!

ಸಿನಿಮಾದಲ್ಲಿ ಬ್ಯುಸಿ ಇದ್ದರೂ ಕುಟುಂಬಕ್ಕಾಗಿ ಸಮಯ;

ಸಿನಿಮಾದಲ್ಲಿ ಬ್ಯುಸಿ ಇದ್ದರೂ ಕುಟುಂಬಕ್ಕಾಗಿ ಸಮಯ; ‘ರಾಕಿಂಗ್​ ಸ್ಟಾರ್​’ ಯಶ್​ ಅವರು ಈಗ ‘ಟಾಕ್ಸಿಕ್’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೂ ಅವರು ಕುಟುಂಬಕ್ಕಾಗಿ ಸಮಯ ಕೊಡುತ್ತಿದ್ದಾರೆ. ಮಕ್ಕಳು ಹಾಗೂ ಪತ್ನಿ ಬಯಸಿದಾಗ ಅವರನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ.. ಸಂಬಂಧಿಕರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ರಾಧಿಕಾ ಪಂಡಿತ್‌ ಕೂಡಾ ಅತ್ಯಂತ ಸರಳವಾಗಿ ಜೀವನ ಸಾಗಿಸುತ್ತಿದ್ದು, ಇತ್ತೀಚೆಗೆ ಅವರು ಸ್ಕೂಟರ್‌ನಲ್ಲಿ ಬೆಂಗಳೂರಿನ ಗಲ್ಲಿಗಳಲ್ಲಿ ಸುತ್ತಾಡಿದ್ದನ್ನು ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ;Meat Rice; ಇದು ಬರೀ ಅಕ್ಕಿ ಅಲ್ಲ.. ಮಾಂಸದ ಅಕ್ಕಿ..!

 

 

Share Post